ADVERTISEMENT

‘ಪ್ರಾದೇಶಿಕ ಭಾಷೆಗಳ ಮೇಲೆ ಪ್ರಹಾರ’

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2021, 13:53 IST
Last Updated 5 ಅಕ್ಟೋಬರ್ 2021, 13:53 IST
ಗೋಕಾಕದಲ್ಲಿ ಈಚೆಗೆ ನಡೆದ ಕಾರ್ಯಕ್ರಮದಲ್ಲಿ ಸಾದಿಕ ಹಲ್ಯಾಳ ವಿರಚಿತ ‘ಕರವೇ ಪಯಣ’ ಪುಸ್ತಕದ ಮುಖಪುಟವನ್ನು ಜಾನಪದ ವಿದ್ವಾಂಸ ಡಾ.ಸಿ.ಕೆ. ನಾವಲಗಿ ಬಿಡುಗಡೆ ಮಾಡಿದರು. ಬಸವರಾಜ ಖಾನಪ್ಪನವರ, ಮಹಾದೇವ ತಳವಾರ, ದೀ‍ಪಕ ಗುಡಗನಟ್ಟಿ ಮೊದಲಾದವರು ಇದ್ದಾರೆ
ಗೋಕಾಕದಲ್ಲಿ ಈಚೆಗೆ ನಡೆದ ಕಾರ್ಯಕ್ರಮದಲ್ಲಿ ಸಾದಿಕ ಹಲ್ಯಾಳ ವಿರಚಿತ ‘ಕರವೇ ಪಯಣ’ ಪುಸ್ತಕದ ಮುಖಪುಟವನ್ನು ಜಾನಪದ ವಿದ್ವಾಂಸ ಡಾ.ಸಿ.ಕೆ. ನಾವಲಗಿ ಬಿಡುಗಡೆ ಮಾಡಿದರು. ಬಸವರಾಜ ಖಾನಪ್ಪನವರ, ಮಹಾದೇವ ತಳವಾರ, ದೀ‍ಪಕ ಗುಡಗನಟ್ಟಿ ಮೊದಲಾದವರು ಇದ್ದಾರೆ   

ಗೋಕಾಕ: ‘ಕನ್ನಡ ಉಳಿಸಿ–ಬೆಳೆಸುವ ನಿಟ್ಟಿನಲ್ಲಿ ಹೋರಾಟಗಾರು, ಸಾಹಿತಿಗಳು, ಬರಹಗಾರರು ಮತ್ತು ಲೇಖಕರು ಎಲ್ಲರೂ ಕೈಜೋಡಿಸಬೇಕು’ ಎಂದು ಜಾನಪದ ವಿದ್ವಾಂಸ ಡಾ.ಸಿ.ಕೆ. ನಾವಲಗಿ ಹೇಳಿದರು.

ನಗರದಲ್ಲಿ ಕರವೇ ಗೋಕಾಕ ತಾಲ್ಲೂಕು ಘಟಕ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪತ್ರಕರ್ತ ಸಾದಿಕ ಹಲ್ಯಾಳ ರಚಿಸಿರುವ ‘ಕರವೇ ಪಯಣ’ ‍ಪುಸ್ತಕದ ಮುಖಪುಟ ಅನಾವರಣಗೊಳಿಸಿ ಅವರು ಮಾತನಾಡಿದರು.

‘ಪ್ರಾದೇಶಿಕ ಭಾಷೆಗಳ ಮೇಲೆ ವ್ಯವಸ್ಥಿತವಾದ ಪ್ರಹಾರ ನಡೆಯುತ್ತಲೇ ಇದೆ. ಇಂತಹ ವ್ಯವಸ್ಥೆಯಲ್ಲಿ ಮ್ಮ ಕನ್ನಡ ಭಾಷೆಯನ್ನು ಯಾವ ರೀತಿಯಾಗಿ ಉಳಿಸಿ ಬೆಳೆಸಬೇಕು ಎನ್ನುವ ಬಗ್ಗೆ ಚಿಂತಿಸುವ ಅಗತ್ಯವಿದೆ’ ಎಂದರು.

ADVERTISEMENT

‘ದೊಡ್ಡ ದೊಡ್ಡ ನಗರಗಳಲ್ಲಿ ಕನ್ನಡದ ಕಂಪು ಕಡಿಮೆಯಾಗುತ್ತಾ ಬಂದಿತ್ತು. ಈಗ ಹಳ್ಳಿಗಳಲ್ಲೂ ಇಂಗ್ಲಿಷ್‌ ಮತ್ತು ಹಿಂದಿ ಭಾಷೆಗಳ ಪ್ರಭಾವ ಹೆಚ್ಚಾಗಿರುವುದನ್ನು ಗಮನಿಸಬಹುದು. ನಮ್ಮ ಕನ್ನಡ ನೆಲದಲ್ಲಿಯೇ ಕನ್ನಡಕ್ಕೆ ನೆಲೆ ಇಲ್ಲದ ಉದಾಹರಣೆಗಳು ಕಂಡುಬರುತ್ತಿವೆ’ ಎಂದರು.

ಕರವೇ ಗೋಕಾಕ ತಾಲ್ಲೂಕು ಘಟಕದ ಅಧ್ಯಕ್ಷ ಬಸವರಾಜ ಖಾನಪ್ಪನವರ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಸಂಚಾಲಕರಾದ ಮಹಾದೇವ ತಳವಾರ, ಸುರೇಶ ಗವ್ವನವರ, ಜಿಲ್ಲಾ ಘಟಕದ ಅಧ್ಯಕ್ಷ ದೀಪಕ ಗುಡಗನಟ್ಟಿ, ಜಿಲ್ಲಾ ಸಂಚಾಲಕ ಬಾಳು ಜಡಗಿ, ಸಂಜು ಬಡಿಗೇರ, ಹೊಳೆಪ್ಪ ಸುಲದಾಳ, ದೇವೇಂದ್ರ ತಳವಾರ, ಕೃಷ್ಣ ಖಾನಪ್ಪನವರ, ಕರೆಪ್ಪ ಕೊಚ್ಚರಗಿ, ಬಸವರಾಜ ಅವರೊಳ್ಳಿ, ರಮೇಶ ತಳವಾರ, ಗಜಾನನ ಶಿಂಗೆ, ಸಾದಿಕ ಹಲ್ಯಾಳ ಇದ್ದರು.

ಶೈಲಾ ಕೊಕ್ಕರಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.