ADVERTISEMENT

ಕೆಎಂಎಫ್‌ ಪ್ರವೇಶಿಸಿದ ರಮೇಶ ಜಾರಕಿಹೊಳಿ ಪುತ್ರ ಅಮರನಾಥ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2019, 15:47 IST
Last Updated 26 ಏಪ್ರಿಲ್ 2019, 15:47 IST

ಬೆಳಗಾವಿ: ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ (ಕೆಎಂಎಫ್‌) ನಿರ್ದೇಶಕರ ಸ್ಥಾನಗಳಿಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಶಾಸಕ ರಮೇಶ ಜಾರಕಿಹೊಳಿ ಅವರ ಪುತ್ರ ಅಮರನಾಥ ಗೋಕಾಕ ಕ್ಷೇತ್ರದಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಇವರ ಜೊತೆ ರಾಯಬಾಗದಿಂದ ವಿವೇಕರಾವ ಪಾಟೀಲ, ಮೂಡಲಗಿಯಿಂದ ಮಲ್ಲಪ್ಪ ಪಾಟೀಲ, ಸವದತ್ತಿಯಿಂದ ಸೋಮಲಿಂಗಪ್ಪ ಮುಗಳಿ, ಕಾಗವಾಡದಿಂದ ಬಾಬೂರಾವ ವಾಗ್ಮೋಡಿ, ಹುಕ್ಕೇರಿಯಿಂದ ರಾಯಪ್ಪ ಡೋಂಗ ಹಾಗೂ ನಾಗನೂರದಿಂದ ಖಾನಪ್ಪಗೋಳ ಅವರು ಕೂಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಖಾನಾಪುರ, ರಾಮದುರ್ಗ, ಕಿತ್ತೂರು, ಬೈಲಹೊಂಗಲ, ಅಥಣಿ, ಚಿಕ್ಕೋಡಿ ಹಾಗೂ ಬೆಳಗಾವಿ ನಿರ್ದೇಶಕರ ಸ್ಥಾನಗಳಿಗಾಗಿ ಇದೇ 28ರಂದು ಚುನಾವಣೆ ನಡೆಯಲಿದೆ.

ADVERTISEMENT

ಅಧ್ಯಕ್ಷ ಸ್ಥಾನಕ್ಕೆ ಯತ್ನ?

ರಾಜಕೀಯ ಪ್ರವೇಶದ ಮೊದಲ ಹಂತವಾಗಿ ಅಮರನಾಥ ಅವರನ್ನು ಕೆಎಂಎಫ್‌ಗೆ ಕರೆತರಲಾಗಿದೆ. ಅಮರನಾಥ ಚಿಕ್ಕಪ್ಪ ಹಾಗೂ ಅರಭಾವಿ ಶಾಸಕರೂ ಆದ ಬಾಲಚಂದ್ರ ಜಾರಕಿಹೊಳಿ ಒಕ್ಕೂಟದಲ್ಲಿ ಪ್ರಾಬಲ್ಯ ಹೊಂದಿದ್ದಾರೆ. ಅಮರನಾಥ ಅವರನ್ನು ಅಧ್ಯಕ್ಷರನ್ನಾಗಿಸಲು ಅವರು ಪ್ರಯತ್ನಿಸಬಹುದು ಎಂದು ಹೇಳಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.