ನಿಪ್ಪಾಣಿ: ‘ಮೋಕ್ಷ ಪಡೆಯಲು ಮನಸ್ಸಿನ ಶಕ್ತಿ ಹೆಚ್ಚಿಸಬೇಕು. ಉತ್ತಮ ಆಲೋಚನೆಗಳಿಂದ ಮನಸ್ಸು ಶುದ್ಧವಾಗುತ್ತದೆ. ದುರ್ಬಲಗೊಳಿಸುವ ಭಾವನೆಗಳನ್ನು ತೊಲಗುತ್ತವೆ. ಮನಸ್ಸಿನ ಶಕ್ತಿ ಹೆಚ್ಚಾಗುತ್ತದೆ’ ಎಂದು ತಾಲ್ಲೂಕಿನ ಆಡಿ ಗ್ರಾಮದ ಶ್ರೀದತ್ತ ದೇವಸ್ಥಾನ ಮಠದ ಪರಮಾತ್ಮರಾಜ ಮಹಾರಾಜರು ಪ್ರತಿಪಾದಿಸಿದರು.
ಶ್ರೀದತ್ತ ದೇವಸ್ಥಾನ ಮಠದಿಂದ ಮಾಘ ಹುಣ್ಣಿಮೆ ಅಂಗವಾಗಿ ಸರ್ವೇಜ್ಞ ಸಾಂಸ್ಕೃತಿಕ ಭವನದಲ್ಲಿ ಬುಧವಾರ ಆಯೋಜಿಸಿದ್ದ ಪ್ರವಚನದಲ್ಲಿ ಮಾತನಾಡಿದ ಅವರು, ‘ಉತ್ತಮ ಆಲೋಚನೆಗಳ ಮೂಲಕ ಮನಸ್ಸಿನ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು. ಒಳ್ಳೆಯ ಕೆಲಸಗಳಿಂದ ಮನಸ್ಸು ಶುದ್ಧವಾಗುತ್ತದೆ’ ಎಂದರು.
‘ಭಯವು ವ್ಯಕ್ತಿಯ ಮಾನಸಿಕ ಶಕ್ತಿಯನ್ನು ಕುಗ್ಗಿಸುತ್ತದೆ. ನಾವು ಒಳ್ಳೆಯ ದಾರಿಯಲ್ಲಿ ನಡೆಯಬೇಕು. ಧರ್ಮದ ಮಾರ್ಗದಲ್ಲಿ ನಡೆಯುವ ಜನರಿಗೆ ಮನಸ್ಸಿನ ಶಕ್ತಿ ಮುಖ್ಯ. ಮನಸ್ಸಿನ ಶಕ್ತಿಯನ್ನು ಉಳಿಸಿಕೊಳ್ಳಲು ಆಧ್ಯಾತ್ಮಿಕ ಚಿಂತನೆ ಅಗತ್ಯ’ ಎಂದರು.
ಬೆಳಿಗ್ಗೆ ಅಭಿಷೇಕ, ಮಹಾ ಆರತಿ, ರಾತ್ರಿ ನಾಮಜಪ, ಪ್ರವಚನ ನಡೆಯಿತು. ಕೃಷ್ಣಾತ ವಸಂತರಾವ ಪಾಟೀಲ, ರಾಮ ಪಾಟೀಲ, ಹರಿ ಪಾಟೀಲ ಮಹಾಪ್ರಸಾದ ನೆರವೇರಿಸಿದರು. ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳಿಂದ ಅಪಾರ ಭಕ್ತರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.