ನಿಪ್ಪಾಣಿ: ‘2024-25ನೇ ಸಾಲಿನ ಮಳೆ ಪರಿಹಾರ ಲೆಕ್ಕ ಶೀರ್ಷಿಕೆ ಯೋಜನೆಯಡಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ರಸ್ತೆ ಡಾಂಬರೀಕರಣ ಕಾಮಗಾರಿಗಳಿಗೆ ಸುಮಾರು ₹10 ಕೋಟಿ ಅನುದಾನ ತರುವ ನಮ್ಮ ಪ್ರಯತ್ನಕ್ಕೆ ಫಲ ಸಿಕ್ಕಿದೆ’ ಎಂದು ಶಾಸಕಿ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ.
‘ತಾಲೂಕಿನ ಬುದಲಮುಖ ಗ್ರಾಮದ ಜೋತಿರಾಮ ಚವಾನ ಮನೆಯಿಂದ ಮಹಾರಾಷ್ಟ್ರ ಗಡಿಯವರೆಗೆ 1.10 ಕಿ.ಮೀ. ಉದ್ದದ ರಸ್ತೆ ಡಾಂಬರೀಕರಣಕ್ಕೆ ₹ 80 ಲಕ್ಷ, ಯರನಾಳದಿಂದ ವಾಗಧಾರಾ ಕೆರೆಯವರೆಗೆ 1.70 ಕಿ.ಮೀ. ಉದ್ದದ ರಸ್ತೆ ಡಾಂಬರೀಕರಣಕ್ಕೆ ₹90 ಲಕ್ಷ ಅನುದಾನ.
ಮಾಂಗೂರ ಬಸ್ ನಿಲ್ದಾಣದಿಂದ ಗರೀಬ ವಸಾಹತುಗಳ ಕಡೆಗೆ ಹೋಗುವ 2 ಕಿ.ಮೀ. ರಸ್ತೆ ಡಾಂಬರೀಕರಣಕ್ಕೆ ₹90 ಲಕ್ಷ, ಯಮಗರ್ಣಿಯಿಂದ ಬೂದಿಹಾಳವರೆಗಿನ 2.03 ಕಿ.ಮೀ. ರಸ್ತೆ ಡಾಂಬರೀಕರಣಕ್ಕೆ ₹75 ಲಕ್ಷ, ಯಮಗರ್ಣಿಯ ಎನ್.ಎಚ್.4 ರಸ್ತೆಯಿಂದ ನಾಗನೂರ ಮುಖಾಂತರ ಶ್ರೀಪೆವಾಡಿ ಕ್ರಾಸ್‍ವರೆಗೆ 3.12 ಕಿ.ಮೀ. ರಸ್ತೆ ಡಾಂಬರೀಕರಣಕ್ಕೆ ₹110 ಲಕ್ಷ ಅನುದಾನ.
ಗಾಯಕನವಾಡಿ ಮುಖ್ಯ ರಸ್ತೆಯಿಂದ ಮಹಾರಾಷ್ಟ್ರದ ಗಡಿಯವರೆಗೆ 0.49 ಕಿ.ಮೀ. ರಸ್ತೆ ಡಾಂಬರೀಕರಣಕ್ಕೆ ₹30 ಲಕ್ಷ, ಕುನ್ನೂರ ಗ್ರಾಮದ ಕುನ್ನೂರ-ಮಾಂಗೂರ ಮುಖ್ಯ ರಸ್ತೆಯಿಂದ ಶಿವಾಪೂರವಾಡಿವರೆಗಿನ 1 ಕಿ.ಮೀ. ರಸ್ತೆ ಡಾಂಬರೀಕರಣಕ್ಕೆ ₹50 ಲಕ್ಷ ಅನುದಾನ.
ಬುದಲಮುಖ ರಸ್ತೆಗೆ ನಿರ್ಮಿಸಿರುವ ಬಾಕ್ಸ್ ಕಲ್ವರ್ಟಗೆ ಸಂರಕ್ಷಣಾ ಗೋಡೆ ಮತ್ತು ಅಪೂರ್ಣ ರಸ್ತೆಯನ್ನು ಡಾಂಬರೀಕರಣ ಹಾಗೂ ಸಿಸಿ ರಸ್ತೆಯ ಕಾಮಗಾರಿಗೆ ₹45 ಲಕ್ಷ, ಭಿವಶಿಯ ಥಳೋಬಾ ದೇವಸ್ಥಾನದಿಂದ ಆಡಿವರೆಗಿನ 2.80 ಕಿ.ಮೀ. ಕೂಡು ರಸ್ತೆಯ ಡಾಂಬರೀಕರಣಕ್ಕೆ ₹140 ಲಕ್ಷ ಅನುದಾನ
ಶ್ರೀಪೆವಾಡಿ ರಸ್ತೆಯಿಂದ ಎನ್.ಎಚ್. 4 ರಸ್ತೆಗೆ ಕೂಡುವ 1.50 ಕಿ.ಮೀ. ಉದ್ದದ ರಸ್ತೆ ಡಾಂಬರೀಕರಣಕ್ಕೆ ₹90 ಲಕ್ಷ, ಯಮಗರ್ಣಿಯ ಸಹಾರಾ ಹೋಟೆಲ್‍ದಿಂದ ವ್ಹಿ.ಎಸ್.ಎಂ. ಕಾಲೇಜವರೆಗೆ 2.70 ಕಿ.ಮೀ. ರಸ್ತೆ ಡಾಂಬರೀಕರಣಕ್ಕೆ ₹110 ಲಕ್ಷ ಅನುದಾನ.
ಕುನ್ನೂರನ ಸ್ಮಶಾನ ರಸ್ತೆಯಿಂದ ಹುನ್ನರಗಿ ಸೀಮೆಯವರೆಗೆ 1.90 ಕಿ.ಮೀ. ರಸ್ತೆ ಡಾಂಬರೀಕರಣಕ್ಕೆ ₹90 ಲಕ್ಷ ಅನುದಾನ ಮಂಜೂರಾಗಿದೆ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.