ADVERTISEMENT

ವಿಚಾರ ಸಂಕಿರಣ ಇಂದು

​ಪ್ರಜಾವಾಣಿ ವಾರ್ತೆ
Published 28 ಜನವರಿ 2023, 6:25 IST
Last Updated 28 ಜನವರಿ 2023, 6:25 IST
ತೆಲಸಂಗದಲ್ಲಿ ಗುರುವಾರ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಮಹೇಶ ಕುಮಠಳ್ಳಿ ಚಾಲನೆ ನೀಡಿದರು
ತೆಲಸಂಗದಲ್ಲಿ ಗುರುವಾರ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಮಹೇಶ ಕುಮಠಳ್ಳಿ ಚಾಲನೆ ನೀಡಿದರು   

ಸವದತ್ತಿ: ಬಹುಭಾಷಾ ಸಂಗಮ ಸಂಸ್ಥೆಯಿಂದ ಜ.28ರಂದು ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯಾನಂತರ ಭಾರತ ಅಭಿವೃದ್ಧಿಯ ಚಿಂತನೆಗಳ ಒಂದು ದಿನದ ಅಂತರರಾಷ್ಟ್ರೀಯ ವಿಚಾರ ಸಂಕಿರಣ
ಹಮ್ಮಿಕೊಳ್ಳಲಾಗಿದೆ ಎಂದು ಪ್ರಾಚಾರ್ಯ ಮಾರುತಿ ದೊಂಬರ ಹೇಳಿದರು.

ಇಲ್ಲಿನ ಬೆಳ್ಳುಬ್ಬಿ ಕಾಲೇಜಿನಲ್ಲಿ ಶುಕ್ರವಾರ ನಡೆದ ಪ್ರತಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂತರರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಅಮೇರಿಕಾ ಪತ್ರಕರ್ತೆ ಡಾ.ಅನಿತಾ ಕಪೂರ ಆಶಯ ನುಡಿ ತಿಳಿಸಲಿದ್ದಾರೆ. ನವದೆಹಲಿಯ ಪಿಜಿಡಿಎವಿ ಕಾಲೇಜಿನ ಪ್ರಾಧ್ಯಾಪಕ ಡಾ.ಹರೀಶ ಅರೋರಾ
ಮುಖ್ಯ ಅಥಿತಿಗಳಾಗಿ, ಡಾ.ವಿದ್ಯಾವತಿ ರಜಪೂತ, ಡಾ.ಎನ್.ಎ. ಕೌಜಗೇರಿ ಅಥಿತಿಗಳಾಗಿ ಆಗಮಿಸಲಿದ್ದಾರೆ ಎಂದು ತಿಳಿಸಿದರು.

ಡಾ.ಕೆ. ರಾಮರಡ್ಡಿ, ಡಾ.ಅರುಂಧತಿ ಬದಾಮಿ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.