ADVERTISEMENT

ಎಸಿಬಿ ಬಲೆಗೆ ಬಿದ್ದ ಪಿಡಬ್ಲುಡಿ ಎಂಜಿನಿಯರ್‌

​ಪ್ರಜಾವಾಣಿ ವಾರ್ತೆ
Published 5 ಜನವರಿ 2019, 14:00 IST
Last Updated 5 ಜನವರಿ 2019, 14:00 IST

ಬೆಳಗಾವಿ: ಕಿರಿಯ ಅಧಿಕಾರಿಯ ಬಾಕಿ ಉಳಿದಿರುವ ವೈದ್ಯಕೀಯ ಮರುಪಾವತಿ ಬಿಲ್‌ಗಳು, ಇತರ ಭತ್ಯೆಗಳ ಬಿಲ್‌ಗಳನ್ನು ಪಾಸ್‌ ಮಾಡಲು ₹ 10,000 ಲಂಚ ಪಡೆಯುತ್ತಿದ್ದ ಲೋಕೋಪಯೋಗಿ ಇಲಾಖೆಯ ಎಕ್ಸಿಕ್ಯುಟಿವ್‌ ಎಂಜಿನಿಯರ್‌ ಕಚೇರಿಯ ಸೂಪರಿಟೆಂಡೆಂಟ್‌ ರಮೇಶ ಶಂಕರ ದೇವಗೇಕರ ಅವರನ್ನು ಎಸಿಬಿ ಅಧಿಕಾರಿಗಳು ಶನಿವಾರ ಬಲೆಗೆ ಕೆಡವಿದ್ದಾರೆ.

ಇದೇ ಇಲಾಖೆಯ ಸುವರ್ಣ ವಿಧಾನಸೌಧ ವಿಭಾಗದಲ್ಲಿ ಪ್ರಥಮ ದರ್ಜೆ ಗುಮಾಸ್ತರಾಗಿರುವ ಶರಣಬಸಪ್ಪ ಈರಪ್ಪ ಮದಸನಾಳ ಅವರ ಬಿಲ್‌ಗಳನ್ನು ಪಾಸ್‌ ಮಾಡಲು ದೇವಗೇಕರ ಲಂಚದ ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು. ಇದಕ್ಕೂ ಮೊದಲು ₹ 3,000 ಲಂಚ ಪಡೆದಿದ್ದರು ಎಂದು ಶರಣಬಸಪ್ಪ ದೂರಿನಲ್ಲಿ ತಿಳಿಸಿದ್ದಾರೆ.

ಇಲ್ಲಿನ ಕೋಟೆ ಆವರಣದಲ್ಲಿರುವ ಕಚೇರಿಯಲ್ಲಿ ದೇವಗೇಕರ ಲಂಚ ಪಡೆಯುತ್ತಿದ್ದಾಗ ಎಸಿಬಿ ಅಧಿಕಾರಿಗಳು ಬಲೆಗೆ ಕೆಡವಿದರು. ಎಸ್ಪಿ ಅಮರನಾಥ ರೆಡ್ಡಿ ಅವರ ನೇತೃತ್ವದಲ್ಲಿ ದಾಳಿ ನಡೆದಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.