ಯಮಕನಮರಡಿ: ಮಳೆಯಿಂದಾಗಿ ರಾಜಾಲಕ್ಕಮಗೌಡಾ ಜಲಾಶಯವು ಈಗಾಗಲೇ 33 ಟಿಎಂಸಿ ಭರ್ತಿಯಾಗಿದೆ. ಶನಿವಾರ ಶೇ 60ರಷ್ಟು ಸಂಗ್ರಹವಾಗಿದೆ. ಕಳೆದ ಎರಡು ದಿನಗಳಿಂದ ಜಲಾಯನ ಪ್ರದೇಶ ಹಾಗೂ ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಮಳೆ ಆಗುತ್ತಿದೆ. ಜಲಾಶಯಕ್ಕೆ ಒಳಹರಿವು 25 ಸಾವಿರ ಕ್ಯುಸೆಕ್ ನೀರು ಬರುತ್ತಿದೆ. ಕಳೆದ ವರ್ಷಕ್ಕಿಂತ ಈ ವರ್ಷ ನೀರು ಹೆಚ್ಚು ಸಂಗ್ರಹವಾಗಿದೆ ಎಂದು ಹಿಡಕಲ್ ಡ್ಯಾಂನ ಸಹಾಯಕ ಅಭಿಯಂತ ಸುಬ್ಬಣ್ಣಾ ಕಾಮತ್ ಹೇಳಿದರು.
ಪಟ್ಟಣದಲ್ಲಿ ಪತ್ರಕರ್ತರೊಂದಿಗೆ ಶನಿವಾರ ಮಾತನಾಡಿದ ಅವರು, ಜಲಾಶಯದ ಜಲಾನಯನ ಪ್ರದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗುವ ಸಾಧ್ಯತೆ ಕುರಿತು ಹವಾಮಾನ ಇಲಾಖೆಯಿಂದ ವರದಿ ಇದ್ದು, ನೀರಿನ ಒಳ ಹರಿವು ಹೆಚ್ಚಾಗುವ ಸಂಭವ ಇದೆ. ಹಿಡಕಲ್ ಡ್ಯಾಂನಿಂದ ಹೊರಗೆ 1630 ಕ್ಯುಸೆಕ್ ಬೀಡಲಾಗಿದೆ ಮತ್ತು ಸಿಬಿಸಿ ಕಾಲುವೆಗೆ 300 ಕ್ಯುಸೆಕ್ ಜಿಆಬಿರ್‌ಸಿ ಕಾಲುವೆ 1200 ಕ್ಯುಸೆಕ್ ಹಾಗೂ ಕುಡಿಯುವ ನೀರು ಇತರೆ ಬಿಡಲಾಗಿದೆ ಎಂದರು.
ಜಲಾಶಯಕ್ಕೆ 17ಟಿ ಎಂಸಿ ನೀರು ಬರಬೇಕಾಗಿದೆ.ನಿರಂತರ ಮಳೆಯಾದರೆ ಹಿಡಕಲ್ ಜಲಾಶಯದ ಕ್ರೆಸ್ಟ್ ಗೇಟ್‌ಗಳ ಮುಖಾಂತರ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಹೊರಬಿಡುವ ಬಗ್ಗೆ ಎರಡು ದಿನಗಳ ಮೊದಲು ನದಿಯ ದಡದಲ್ಲಿ ವಾಸಿಸುತ್ತಿರುವ ಜನರಿಗೆ ಮುನ್ನೆಚ್ಚರಿಕೆ ನೀಡಲಾಗುವುದು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.