ರಾಮದುರ್ಗ: ನಿವೃತ್ತ ಅರಣ್ಯಾಧಿಕಾರಿ ಸಿ.ಬಿ. ಪಾಟೀಲ ಅವರು ತಾಲ್ಲೂಕಿನ ಲಿಂಗಾಯತ ಪಂಚಮಸಾಲಿ ಸಮಾಜದ ಅಧ್ಯಕ್ಷರಾಗಿ ಆಯ್ಕೆಗೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ‘ಸಮಾಜದ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಮಾಜದ ಸಂಘಟನೆ ಮಾಡುವೆ. ಸಮಾಜದ ಹಿತರಕ್ಷಣೆಗೆ ಬದ್ಧವಾಗಿರುವೆ. ಸಮಾಜದ ಮಕ್ಕಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಪುನರಾರಂಭ ಮಾಡಲಾಗುವುದು’ ಎಂದರು.
ಪದಾಧಿಕಾರಿಗಳ ಆಯ್ಕೆ: ಕಾರ್ಯದರ್ಶಿ–ಮಂಜುನಾಥ ನವಲಗುಂದ, ಉಪಾಧ್ಯಕ್ಷರು– ಜಿ.ಎಚ್. ಪಾಟೀಲ, ಬಾಳು ಹೊಸಮನಿ, ಬಿ.ಎನ್. ಮಾದನ್ನವರ, ಆನಂದ ಕುದರಿ, ಈರಣ್ಣಸುರೇಶ ಸಿದ್ನಾಳ, ಭೀಮಣ್ಣ ಬೂದಿ, ಯುವ ಘಟಕದ ಅಧ್ಯಕ್ಷ–ಬಸವರಾಜ ಮಹಾಂತೇಶ ಕೊಪ್ಪದ, ಕಾರ್ಯಾಧ್ಯಕ್ಷ– ಹಣಮಂತ ಕೋಟಗಿ, ಕಾರ್ಯದರ್ಶಿ–ಬಿ.ಎಸ್. ಪಾಟೀಲ ಅವರನ್ನುಆಯ್ಕೆ ಮಾಡಲಾಯಿತು.
ವೈ.ಎಚ್. ಪಾಟೀಲ, ಪಿ.ಎಫ್. ಪಾಟೀಲ, ಪರುತಗೌಡ ಪಾಟೀಲ, ಮಾರುತಿ ಕೊಪ್ಪದ, ಬಿ.ಎಸ್. ಬೆಳವಣಕಿ, ಶಿವಪ್ಪ ಮೇಟಿ, ಎನ್.ಬಿ. ದಂಡಿನದುರ್ಗಿ, ಜಿ.ವಿ. ನಾಡಗೌಡ್ರ ಮಾತನಾಡಿದರು. ವೀರರಾಣಿ ಚನ್ನಮ್ಮ ಲಿಂಗಾಯತ ಪಂಚಮಸಾಲಿ ಟ್ರಸ್ಟ್ ಅಧ್ಯಕ್ಷ ಬಿ.ಎಫ್. ಬಸಿಡೋಣಿ, ಶಾಸನಗೌಡ ಪಾಟೀಲ, ಐ.ಎಸ್. ಹರನಟ್ಟಿ, ಮಹಾದೇವಪ್ಪ ಮದಕಟ್ಟಿ, ಬಾಳಪ್ಪ ಹಂಜಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.