ADVERTISEMENT

ಸಿದ್ಧಲಿಂಗೇಶ್ವರ ಮಹಾರಾಜರ ಜಾತ್ರೆ: ಕುಸ್ತಿಪ್ರೇಮಿಗಳನ್ನು ಸೆಳೆದ ಜಟ್ಟಿಗಳ ಕಾಳಗ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2025, 15:25 IST
Last Updated 8 ಏಪ್ರಿಲ್ 2025, 15:25 IST
ಮುಗಳಖೋಡದಲ್ಲಿ ಸೋಮವಾರ ನಡೆದ ಕುಸ್ತಿ ಪಂದ್ಯಾವಳಿಗೆ  ಮುರುಘರಾಜೇಂದ್ರ ಸ್ವಾಮೀಜಿ ಚಾಲನೆ ನೀಡಿದರು
ಮುಗಳಖೋಡದಲ್ಲಿ ಸೋಮವಾರ ನಡೆದ ಕುಸ್ತಿ ಪಂದ್ಯಾವಳಿಗೆ  ಮುರುಘರಾಜೇಂದ್ರ ಸ್ವಾಮೀಜಿ ಚಾಲನೆ ನೀಡಿದರು   

ಮುಗಳಖೋಡ: ಪಟ್ಟಣದಲ್ಲಿ ಸಿದ್ಧಲಿಂಗೇಶ್ವರ ಮಹಾರಾಜರ ಜಾತ್ರೆ ಪ್ರಯುಕ್ತ, ಸೋಮವಾರ ಆಯೋಜಿಸಿದ್ದ ಜಂಗಿನಿಕಾಲಿ ಕುಸ್ತಿ ಪಂದ್ಯಾವಳಿ ಜನರನ್ನು ಸೆಳೆಯಿತು.

ನೇಪಾಳದ ಪೈಲ್ವಾನ್‌ ದೇವತಾಂಬಾ ಅವರು, ಉತ್ತರ ಪ್ರದೇಶದ ಅಮಿತ್‌ಕುಮಾರ್ ಜತೆ ಸೆಣಸಿ ವಿಜಯಶಾಲಿಯಾದರೆ, ಮಹಾರಾಷ್ಟ್ರದ ಪೈಲ್ವಾನ್ ಸಿಕಂದರ್‌ ಇರಾನ್‌ನ ಹಾದಿ ವಿರುದ್ಧ ಗೆದ್ದು ಬೀಗಿದರು.

ಮುರುಘರಾಜೇಂದ್ರ ಸ್ವಾಮೀಜಿ, ಶಾಸಕ ಮಹೇಂದ್ರ ತಮ್ಮಣ್ಣವರ ಹಾಗೂ ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ಪಂದ್ಯಾವಳಿಗೆ  ಚಾಲನೆ ನೀಡಿದರು.

ADVERTISEMENT

ಪುರಸಭೆ ಸದಸ್ಯ ಪರಗೌಡ ಖೇತಗೌಡರ, ಹಾಲಪ್ಪ ಶೇಗುಣಸಿ, ರಾಜು ನಾಯಿಕ, ಚೇತನ ಯಡವಣ್ಣವರ, ಮಹಾಂತೇಶ ಯರಡೆತ್ತಿ, ಶಿವಾನಂದ ಮೆಕ್ಕಳಕಿ, ಮುತ್ತಪ್ಪ ಬಾಳೋಜಿ, ಮಾರುತಿ ಗೋಕಾಕ, ಲಕ್ಷಣ ಗೋಕಾಕ, ಅಗ್ರಾಣಿ ಶೇಗುಣಸಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.