ADVERTISEMENT

ಬೆಳಗಾವಿ: ಕಚ್ಚಿದ ಹಾವು ಹಿಡಿದು ಆಸ್ಪತ್ರೆಗೆ ಬಂದ ರೈತ

​ಪ್ರಜಾವಾಣಿ ವಾರ್ತೆ
Published 17 ಜೂನ್ 2025, 16:16 IST
Last Updated 17 ಜೂನ್ 2025, 16:16 IST
<div class="paragraphs"><p>ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ಮಂಗಳವಾರ ಹಾವನ್ನು ಪ್ಲಾಸ್ಟಿಕ್ ಬಾಟ್ಲಿಯಲ್ಲಿ ತಂದ&nbsp;ಯಲ್ಲ‍ಪ್ಪ ಗುರವ್‌</p></div>

ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ಮಂಗಳವಾರ ಹಾವನ್ನು ಪ್ಲಾಸ್ಟಿಕ್ ಬಾಟ್ಲಿಯಲ್ಲಿ ತಂದ ಯಲ್ಲ‍ಪ್ಪ ಗುರವ್‌

   

ಬೆಳಗಾವಿ: ತಾಲ್ಲೂಕಿನ ಅಂಬೇವಾಡಿ ಗ್ರಾಮದಲ್ಲಿ ಮಂಗಳವಾರ ರೈತ ಯಲ್ಲ‍ಪ್ಪ ಗುರವ್‌ ಕೃಷಿ ಕೆಲಸದಲ್ಲಿ ತೊಡಗಿದ್ದಾಗ, ಎಡಗೈ ಹೆಬ್ಬೆರಳಿಗೆ ಹಾವಿನ ಮರಿ ಕಚ್ಚಿತು. ಪ್ಲಾಸ್ಟಿಕ್‌ ಬಾಟ್ಲಿಯಲ್ಲಿ ಹಾವು ಹಾಕಿಕೊಂಡು, ಅದರ ಸಮೇತ ಜಿಲ್ಲಾಸ್ಪತ್ರೆಗೆ ಬಂದ ದಾಖಲಾದರು.

‘ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ರಸೆಲ್‌ ಜಾತಿಯ ಹಾವು ಕಚ್ಚಿದೆ. ಅವರು ಹಾವು ತಂದಿದ್ದರಿಂದ, ಅವರಿಗೆ ಯಾವ ಸ್ವರೂಪದ ಚಿಕಿತ್ಸೆ ನೀಡಬೇಕೆಂದು ತಿಳಿಯಲುನೆರವಾಯಿತು’ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ವಿಠ್ಠಲ ಶಿಂಧೆ ತಿಳಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.