ಮೂಡಲಗಿ: ‘ಮೂಡಲಗಿಯ ಶ್ರೀ ಮಹಾಲಕ್ಷ್ಮೀ ಅರ್ಬನ್ ಕೋ.ಆಪ್ ಕ್ರೆಡಿಟ್ ಸೊಸೈಟಿಯು ಪ್ರಸಕ್ತ ಮಾರ್ಚ್ ಕೊನೆಯಲ್ಲಿ ₹4.04 ಕೋಟಿ ಲಾಭ ಗಳಿಸಿ ಪ್ರಗತಿಯಲ್ಲಿ ಸಾಗಿದೆ’ ಎಂದು ಸೊಸೈಟಿಯ ಅಧ್ಯಕ್ಷ ಮಲ್ಲಪ್ಪ ಗಾಣಿಗೇರ ಹೇಳಿದರು.
ಇಲ್ಲಿಯ ಶ್ರೀ ಮಹಾಲಕ್ಷ್ಮೀ ಅರ್ಬನ್ ಕೋ.ಆಪ್ ಕ್ರೆಡಿಟ್ ಸೊಸೈಟಿಯ 33ನೇ ವರ್ಷದ ವಾರ್ಷಿಕ ಸಭೆಯನ್ನು ಉದ್ಧೇಶಿಸಿ ಮಾತನಾಡಿದ ಅವರು, ‘ಸದ್ಯ ಸೊಸೈಟಿಯು 13,966 ಸದಸ್ಯರನ್ನು ಹೊಂದಿದ್ದು ₹3.02 ಕೋಟಿ ಶೇರು ಬಂಡವಾಳ, ₹120.75 ಕೋಟಿ ಠೇವುಗಳು, ₹151.78 ಕೋಟಿ ದುಡಿಯುವ ಬಂಡವಾಳ ಹೊಂದಿದ್ದು ₹106.55 ಕೋಟಿ ವಿವಿಧ ಕ್ಷೇತ್ರದ ಜನರಿಗೆ ಸಾಲ ನೀಡಿದೆ’ ಎಂದರು.
‘ಬೆಳಗಾವಿ, ಬಾಗಲಕೋಟೆ ಜಿಲ್ಲೆಗಳ ವ್ಯಾಪ್ತಿಯಲ್ಲಿ ಒಟ್ಟು 10 ಶಾಖೆಗಳನ್ನು ಹೊಂದಿದ್ದು, ಎಲ್ಲ ಶಾಖೆಗಳು ಉತ್ತಮ ಲಾಭದೊಂದಿಗೆ ಪ್ರಗತಿಯಲ್ಲಿವೆ’ ಎಂದರು.
ಲೆಕ್ಕಪರಿಶೋಧಕ ಸೈದಪ್ಪ ಗದಾಡಿ, ರಾಮದುರ್ಗದ ಎಸ್.ವಿ. ಹೊನ್ನೂಂಗರ, ಸುಣಧೋಳಿಯ ಭೀಮಗೌಡಾ ಪಾಟೀಲ ಮಾತನಾಡಿದರು.
ಕಾನೂನು ಸಲಹೆಗಾರ ಎಸ್.ವೈ. ಹೊಸಟ್ಟಿ, ಖಾನಟ್ಟಿಯ ಎಂ.ಎಸ್. ತುಪ್ಪದ, ಕಟಕೋಳದ ಎಸ್.ಎಸ್. ಪೂಜೇರಿ, ಮುನವಳ್ಳಿಯ ಎಸ್.ಬಿ. ಮೇಟಿ, ಜಮಖಂಡಿಯ ಎನ್.ಎ. ಶಾನವಾಡ, ಹಾರೂಗೇರಿಯ ಎಂ.ಜಿ. ಪಾಟೀಲ, ಸಾಲಳ್ಳಿಯ ಎಸ್.ಎನ್. ಹೊಸಗೌಡ್ರ ಇದ್ದರು.
ಸೊಸೈಟಿಯ ಉಪಾಧ್ಯಕ್ಷ ಪ್ರಕಾಶ ನಿಡಗುಂದಿ ಸೊಸೈಟಿಯ ಪ್ರಗತಿ ಕುರಿತು ಮತ್ತು ಪ್ರಧಾನ ವ್ಯವಸ್ಥಾಪಕ ಚಂದ್ರಶೇಖರ ಬಗನಾಳ ಅಡಾವೆ ಪತ್ರಿಕೆ ಮತ್ತು ವಾರ್ಷಿಕ ವರದಿಯನ್ನು ಓದಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಹಳ್ಳೂರ ಮಹಾಲಕ್ಷ್ಮೀ ಸೊಸೈಟಿಯ ವ್ಯವಸ್ಥಾಪಕ ಕೆಂಪಣ್ಣ ಹುಬ್ಬಳ್ಳಿ, ಲೆಕ್ಕಪರಿಶೋಧಕ ಸೈದಪ್ಪ ಗದಾಡಿ, ಶಿವಬೋಧರಂಗ ಸೊಸೈಟಿಯಲ್ಲಿ ಪ್ರಧಾನ ವ್ಯವಸ್ಥಾಪಕರಾಗಿ ಪದೋನ್ನತಿ ಹೊಂದಿರುವ ವಿ.ಎಚ್. ಬಾಲರಡ್ಡಿ, ಕಾನೂನು ಸಲಹೆಗಾರ ಎಸ್.ವೈ. ಹೊಸಟ್ಟಿ ಅವರನ್ನು ಸನ್ಮಾನಿಸಿದರು.
ನಿರ್ದೇಶಕರಾದ ಮುತ್ತಪ್ಪ ಈರಪ್ಪನವರ, ಶಿವಬಸು ಖಾನಟ್ಟಿ, ಸಂತೋಷ ಪಾರ್ಶಿ, ಮಹಾದೇವ ಗೋಕಾಕ, ಸಚಿನ ಮುನ್ಯಾಳ, ಸಾಂವಕ್ಕಾ ಶೆಕ್ಕಿ, ಭಾರತಿ ಪಾಟೀಲ, ವಿದ್ಯಾಶ್ರೀ ಮುರಗೋಡ, ಗೌರವ್ವ ಪಾಟೀಲ, ಶೋಭಾ ಕದಂ, ಸೊಸೈಟಿಯ ಮಾರಾಟಾಧಿಕಾರಿ ಅರ್ಜುನ ಗಾಣಿಗೇರ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.