ADVERTISEMENT

ಕೌಜಲಗಿ: ಸಂಭ್ರಮದ ಶಾಲಾ ಪ್ರಾರಂಭೋತ್ಸವ

​ಪ್ರಜಾವಾಣಿ ವಾರ್ತೆ
Published 17 ಮೇ 2022, 3:56 IST
Last Updated 17 ಮೇ 2022, 3:56 IST
ಕೌಜಲಗಿ ಸಮೀಪದ ಬೆಟಗೇರಿ ಗ್ರಾಮದ ವಿವಿಡಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ವಿದ್ಯಾರ್ಥಿಗೆ ಸಿಹಿ ತಿನಿಸಿ ಶಾಲೆಗೆ ಸ್ವಾಗತ ಕೋರಲಾಯಿತು
ಕೌಜಲಗಿ ಸಮೀಪದ ಬೆಟಗೇರಿ ಗ್ರಾಮದ ವಿವಿಡಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ವಿದ್ಯಾರ್ಥಿಗೆ ಸಿಹಿ ತಿನಿಸಿ ಶಾಲೆಗೆ ಸ್ವಾಗತ ಕೋರಲಾಯಿತು   

ಕೌಜಲಗಿ: ಸಮೀಪದ ಬೆಟಗೇರಿ ಗ್ರಾಮದ ವಿವಿಡಿ ಸರ್ಕಾರಿ ಪ್ರೌಢಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ ಸಡಗರ ಸಂಭ್ರಮದಿಂದ ನಡೆಯಿತು. ಶಾಲೆಯ ಪ್ರವೇಶ ದ್ವಾರ ಹಸಿರು ತಳಿರು ತೋರಣಗಳಿಂದ ಕಂಗೊಳಿಸುತ್ತಿತ್ತು.

ಶಾಲಾ ಮುಖ್ಯೋಪಾಧ್ಯಯ ರಮೇಶ ಅಳಗುಂಡಿ ಅವರು, ಮಕ್ಕಳಿಗೆ ಗುಲಾಬಿ ಹೂ, ಪೆನ್ ನೀಡಿ ಪುಷ್ಪ ವೃಷ್ಟಿ ಮೂಲಕ ಬರಮಾಡಿಕೊಂಡರು. ಸರ್ಕಾರ ಈ ಶೈಕ್ಷಣಿಕ ವರ್ಷವನ್ನು ಕಲಿಕಾ ಚೇತರಿಕೆ ವರ್ಷವೆಂದು ಘೋಷಿಸಿದ್ದರಿಂದ, ಕೋವಿಡ್ ಅಲೆಯಲ್ಲಿ ಎರಡು ವರ್ಷ ಹಿಂದುಳಿದ ವಿಷಯಗಳನ್ನು ವಿಶೇಷವಾಗಿ ಬೋಧಿಸಲಾಗುವುದು ಎಂದರು.

ಮಲ್ಲಿಕಾರ್ಜುನ ಹಿರೇಮಠ, ಮೋಹನ ತುಪ್ಪದ, ಶುಭಾ.ಬಿ., ವಿವಿ. ಬಿರಾದಾರ, ಪ್ರಕಾಶ ಕುರಬೇಟ, ವೈ.ಎಂ.ವಗ್ಗರ, ಈರಣ್ಣ ಪಟಗುಂದಿ, ಎ.ಬಿ.ತಾಂವಶಿ, ಈಶ್ವರ ಮುನವಳ್ಳಿ, ರಾಕೇಶ ನಡೋಣೆ, ಮಲ್ಹಾರಿ ಪೋಳ, ಸೌಮ್ಯಶ್ರೀ ಗಂಗಾ, ಶಮಾ ಪ್ರರ್ವೀಣ ಮುರಗೋಡ, ಬೆಟಗೇರಿ, ಅಕ್ಕಿಸಾಗರ, ತಪಸಿ, ಕೆಮ್ಮನಕೋಲ, ಮರಡಿಶಿವಾಪೂರ, ಬಗರನಾಳ ಗ್ರಾಮಗಳ ಶಿಕ್ಷಣಪ್ರೇಮಿಗಳು, ಪಾಲಕರು ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.