ADVERTISEMENT

ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆಗೆ ‘ತಾಂತ್ರಿಕ ದಕ್ಷತೆ ಪ್ರಶಸ್ತಿ’

​ಪ್ರಜಾವಾಣಿ ವಾರ್ತೆ
Published 26 ಜೂನ್ 2025, 15:48 IST
Last Updated 26 ಜೂನ್ 2025, 15:48 IST
ಎಸ್. ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯ 2023-24ರ ಹಂಗಾಮಿನ ‘ಅತ್ಯುತ್ತಮ ತಾಂತ್ರಿಕ ದಕ್ಷತೆ’ ಪ್ರಶಸ್ತಿಯನ್ನು ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆಯ  ಆಡಳಿತ ಮಂಡಳಿಯವರು ಪಡೆದರು.
ಎಸ್. ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯ 2023-24ರ ಹಂಗಾಮಿನ ‘ಅತ್ಯುತ್ತಮ ತಾಂತ್ರಿಕ ದಕ್ಷತೆ’ ಪ್ರಶಸ್ತಿಯನ್ನು ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆಯ  ಆಡಳಿತ ಮಂಡಳಿಯವರು ಪಡೆದರು.   

ಅಥಣಿ: ಎಸ್. ನಿಜಲಿಂಗಪ್ಪ ಸಕ್ಕರೆ ಸಂಸ್ಥೆಗೆ  2023-24ರ ಕ್ರಷಿಂಗ್ ಸೀಸನ್‌ಗಾಗಿ ‘ಅತ್ಯುತ್ತಮ ತಾಂತ್ರಿಕ ದಕ್ಷತೆ ಪ್ರಶಸ್ತಿ’ಯು ಕೃಷ್ಣ ಸಹಕಾರಿ ಸಕ್ಕರೆ ಕಾರ್ಖಾನೆಗೆ ಲಭಿಸಿರುವುದು  ಹೆಮ್ಮೆಯ ಸಂಗತಿ’ ಎಂದು ಕಾರ್ಖಾನೆ ಅಧ್ಯಕ್ಷ ಪರಪ್ಪ ಸವದಿ ಹೇಳಿದರು.

ತಾಲೂಕಿನ ಸಂಕೋನಟ್ಟಿ ಗ್ರಾಮದ ಬಳಿಯ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆ ಕಚೇರಿಯಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು,  ರಾಜ್ಯದಲ್ಲೇ ಸಹಕಾರಿ ರಂಗದ ಸಕ್ಕರೆ ಕಾರ್ಖಾನೆಗಳಲ್ಲಿ ಉತ್ತಮ ತಾಂತ್ರಿಕ ನಿರ್ವಹಣೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದಿದೆ. ಯಾವುದೇ ಉದ್ಯಮದ ಉತ್ತಮ ಕಾರ್ಯಕ್ಷಮತೆಯನ್ನು ಗುರುತಿಸುವುದು ಜೊತೆಗೆ ಮತ್ತಷ್ಟು ಸುಧಾರಿಸಲು ಮತ್ತು ಇತರರು ಸ್ಪರ್ಧಿಸಲು ಪ್ರೋತ್ಸಾಹಿಸುತ್ತದೆ’  ಎಂದು ಹೇಳಿದರು.

ಪ್ರಶಸ್ತಿಯನ್ನು ಎಸ್. ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯ ಅಧ್ಯಕ್ಷ ಮತ್ತು ಕೃಷಿ ಮಾರುಕಟ್ಟೆ ಸಚಿವರು ಶಿವಾನಂದ ಪಾಟೀಲ ಅವರು ಬೆಳಗಾವಿಯ ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಅದ್ಯಕ್ಷರು, ಉಪಾಧ್ಯಕ್ಷರು ಮತ್ತು ನಿರ್ದೇಶಕ ಮಂಡಳಿಯ ಸದಸ್ಯರಿಗೆ ಪ್ರಶಸ್ತಿ ನೀಡಿ ಗೌರವಿಸಿದರು.

ADVERTISEMENT

ಈ ವೇಳೆ ಉಪಾಧ್ಯಕ್ಷ ಶಂಕರ ವಾಘಮೋಡೆ, ನಿರ್ದೇಶಕರಾದ ಗುರುಬಸು ತೇವಮನಿ, ಶಾಂತಿನಾಥ ನಂದೇಶ್ವರ, ಘೋಳಪ್ಪ ಜತ್ತಿ, ರಮೇಶ ಪಟ್ಟಣ, ವಿಶ್ವನಾಥ ಪಾಟೀಲ, ರುಕ್ಮೀಣಿ ಕುಲಕರ್ಣಿ, ಸೌರಭ ಪಾಟೀಲ, ಸುನಂದಾ ನಾಯಿಕ, ಸಿದ್ರಾಯ ನಾಯಿಕ, ಮಲ್ಲಿಕಾರ್ಜುನ ಗೋಟಖಿಂಡಿ, ಹಣಮಂತ ಜಗದೇವ, ವ್ಯವಸ್ಥಾಕ ನಿರ್ದೇಶಕ ಜಿ ಎಮ್ ಪಾಟೀಲ, ಮುಖಂಡ ಶ್ರೀಶೈಲ ನಾಯಿಕ, ಮುಖ್ಯ ಲೆಕ್ಕಾಧಿಕಾರಿ ಶಂಕರ ಗೋಟಖಿಂಡಿ, ವಿನಾಯಕ ಮನಗೂಳಿ, ಸುರೇಶ ಠಕ್ಕಣ್ಣವರ, ಹೆಚ್ ಡಿ ಧರಿಗೌಡರ, ಸಿ ಎಸ್ ಪಾಟೀಲ, ಡಿ ಬಿ ದೇಸಾಯಿ ಇನ್ನಿತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.