ADVERTISEMENT

ವಕೀಲ ಸಂತೋಷ ಹತ್ಯೆಯ 3ನೇ ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 22 ಜೂನ್ 2025, 14:23 IST
Last Updated 22 ಜೂನ್ 2025, 14:23 IST
ವಕೀಲ ಸಂತೋಷ ಪಾಟೀಲ ಹತ್ಯೆಯ 3 ನೇ ಪ್ರಮುಖ ಆರೋಪಿ, ವಕೀಲ ಕಿರಣ ಕೆಂಪವಾಡೆ ಅವನ ಭಾವಚಿತ್ರ.
ವಕೀಲ ಸಂತೋಷ ಪಾಟೀಲ ಹತ್ಯೆಯ 3 ನೇ ಪ್ರಮುಖ ಆರೋಪಿ, ವಕೀಲ ಕಿರಣ ಕೆಂಪವಾಡೆ ಅವನ ಭಾವಚಿತ್ರ.   

ರಾಯಬಾಗ: ವಕೀಲ ಸಂತೋಷ ಪಾಟೀಲ ಹತ್ಯೆಯ 3ನೇ ಆರೋಪಿ, ವಕೀಲ ಕಿರಣ ಕೆಂಪವಾಡೆ(27)ಯನ್ನು ರಾಯಬಾಗ ಪೊಲೀಸರು ಹುಕ್ಕೇರಿ ತಾಲ್ಲೂಕಿನ ಕುರಣಿ ಗ್ರಾಮದಲ್ಲಿ ಬಂಧಿಸಿ, ರಾಯಬಾಗ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಏಪ್ರಿಲ್ 29ರಂದು ರಾಯಬಾಗ ಕೋರ್ಟ್‌ಗೆ ತೆರಳುತ್ತಿದ್ದಾಗ ಸಂತೋಷ ಪಾಟೀಲನನ್ನು ಅಪಹರಿಸಿ, ಕೊಲೆ ಮಾಡಲಾಗಿತ್ತು. ರಾಯಬಾಗ ಪೊಲೀಸರರು ಆರೋಪಿಗಳನ್ನು ಬಂಧಿಸುವಲ್ಲಿ ವಿಫಲರಾಗಿದ್ದರು. ಪೊಲೀಸ್ ವೈಫಲ್ಯತೆಯನ್ನು ಖಂಡಿಸಿ ರಾಯಬಾಗ ವಕೀಲರು ಕೋರ್ಟ್ ಕಲಾಪಗಳಿಂದ ದೂರ ಉಳಿದು ಪ್ರತಿಭಟನೆ ನಡೆಸಿ ಕೊಲೆ ಪ್ರಕರಣದ ಪ್ರಮುಖ ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಹಾಗೂ ಈ ಪ್ರಕರಣವನ್ನು ಎಸ್ಐಟಿಗೆ ಒಪ್ಪಿಸುವಂತೆ ಆಗ್ರಹಿಸಿದ್ದರು.

ಇದರ ಬೆನ್ನಲ್ಲೇ ಕೊಲೆಯ 3ನೇ ಪ್ರಮುಖ ಆರೋಪಿ ಕಿರಣ ಕೆಂಪವಾಡೆಯನ್ನು ಈಗ ಪೊಲೀಸರು ಬಂಧಿಸಿದ್ದಾರೆ. ಆದರೆ ರಾಯಬಾಗ ವಕೀಲರ ಬೇಡಿಕೆಯಂತೆ ಕೊಲೆಯ 1, 2, 4ನೇ ಪ್ರಮುಖ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ವಿಫಲರಾಗಿದ್ದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ADVERTISEMENT
ವಕೀಲ ಸಂತೋಷ ಪಾಟೀಲ ಹತ್ಯೆಯ 3 ನೇ ಆರೋಪಿ ಕಿರಣ ಕೆಂಪವಾಡೆಯನ್ನು ಬಂಧಿಸಿ ನ್ಯಾಯಾಲಯಕ್ಕೆ ಕರೆತರುತ್ತಿರುವ ಭಾವಚಿತ್ರ.
ವಕೀಲ ಸಂತೋಷ ಪಾಟೀಲ ಹತ್ಯೆಯ 3 ನೇ ಆರೋಪಿ ಕಿರಣ ಕೆಂಪವಾಡೆಯನ್ನು ಬಂಧಿಸಿ ನ್ಯಾಯಾಲಯಕ್ಕೆ ಕರೆತರುತ್ತಿರುವ ಭಾವಚಿತ್ರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.