ADVERTISEMENT

ಹುಕ್ಕೇರಿ: ಮೀನುಗಾರಿಕೆ ಅಧಿಕಾರಿಗೆ ಉಮೇಶ್ ಕತ್ತಿ ತರಾಟೆ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2020, 8:45 IST
Last Updated 5 ಸೆಪ್ಟೆಂಬರ್ 2020, 8:45 IST
ಮೂಡಲಗಿ ತಾಲ್ಲೂಕಿನ ಕಲ್ಲೋಳಿ ಬಳಿಯಲ್ಲಿ ಜಿಎಲ್‌ಬಿಸಿ ಕಾಲುವೆ ಪಕ್ಕದ ಸೇವಾರ ರಸ್ತೆ ದುರಸ್ತಿ ಕಾಮಗಾರಿಗೆ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರು ಶುಕ್ರವಾರ ಭೂಮಿ ಪೂಜೆ ನೆರವೇರಿಸಿ ಚಾಲನೆ ನೀಡಿದರು
ಮೂಡಲಗಿ ತಾಲ್ಲೂಕಿನ ಕಲ್ಲೋಳಿ ಬಳಿಯಲ್ಲಿ ಜಿಎಲ್‌ಬಿಸಿ ಕಾಲುವೆ ಪಕ್ಕದ ಸೇವಾರ ರಸ್ತೆ ದುರಸ್ತಿ ಕಾಮಗಾರಿಗೆ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರು ಶುಕ್ರವಾರ ಭೂಮಿ ಪೂಜೆ ನೆರವೇರಿಸಿ ಚಾಲನೆ ನೀಡಿದರು   

ಹುಕ್ಕೇರಿ: ತಾಲ್ಲೂಕಿನಲ್ಲಿನ ಮೀನುಗಾರಿಕೆ ಕುರಿತು ಶಾಸಕ ಉಮೇಶ್ ಕತ್ತಿ ಸಂಬಂಧಿಸಿದ ಅಧಿಕಾರಿಗೆ ಮಾಹಿತಿ ಕೇಳಿದಾಗ, ಸಮರ್ಪಕ ಉತ್ತರ ಬಾರದಿರುವುದಕ್ಕೆ ಅಧಿಕಾರಿಗಳು ತರಾಟೆಗೊಳಗಾದರು.

ಶುಕ್ರವಾರ ತಾಲ್ಲೂಕು ಪಂಚಾಯ್ತಿ ಸಭಾ ಭವನದಲ್ಲಿ ನಡೆದ ಕೋವಿಡ್ 19 ಮತ್ತು ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಶಾಸಕರು, ಕ್ಷೇತ್ರದ ವಿವಿಧ ಕೆರೆಗಳಲ್ಲಿ ಎಷ್ಟು ಮೀನು ಬಿಟ್ಟಿದ್ದೀರಿ, ಎಲ್ಲೆಲ್ಲಿ ಎಂದು ಕೇಳಿದಾಗ, ಅಧಿಕಾರಿ ಕುಲಕರ್ಣಿ ಸಮರ್ಪಕ ಮಾಹಿತಿ ನೀಡಲಿಲ್ಲ. ಸಿಟ್ಟಿಗೆದ್ದ ಶಾಸಕರು, ಮೀನುಗಾರಿಕೆ ಮೇಲಧಿಕಾರಿ ಸೇರಿ ಮೀನುಗಾರಿಕೆ ಇಲಾಖೆ ಸಭೆ ಕರೆಯಲು ತಹಶೀಲ್ದಾರ್ ಅಶೋಕ ಗುರಾಣಿಗೆ ಸೂಚಿಸಿದರು.

ತಾಲ್ಲೂಕು ಪಂಚಾಯ್ತಿ ಇಒ ಬಿ.ಕೆ.ಲಾಳಿ, ಸಿಪಿಐ ಗುರುರಾಜ ಕಲ್ಯಾಣಶೆಟ್ಟಿ, ತಾಲ್ಲೂಕು ಮಟ್ಟದ ಅನುಷ್ಠಾನ ಅಧಿಕಾರಿಗಳು, ಗ್ರಾಮ ಪಂಚಾಯ್ತಿ ಆಡಳಿತಾಧಿಕಾರಿಗಳು, ಪಿಡಿಒಗಳು ಹಾಜರಿದ್ದರು.
ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಶ್ರೀಶೈಲ್ ಹಿರೇಮಠ ಸ್ವಾಗತಿಸಿದರು.ಮ್ಯಾನೇಜರ್ ಆರ್.ಎ.ಚಟ್ನಿ ವಂದಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.