ADVERTISEMENT

ಪ್ಲಾಸ್ಟಿಕ್ ಮುಕ್ತ ಭಾರತಕ್ಕೆ ಕೈಜೋಡಿಸಿ

ವಿಶ್ವ ಶೈಕ್ಷಣಿಕ ದಿನಾಚರಣೆ ಕಾರ್ಯಕ್ರಮದಲ್ಲಿ ಸಚಿವ ಅಂಗಡಿ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2019, 13:48 IST
Last Updated 6 ಅಕ್ಟೋಬರ್ 2019, 13:48 IST
ಬೆಳಗಾವಿಯಲ್ಲಿ ಸದ್ಗುರು ಸಾಹಿತ್ಯ ಪ್ರತಿಷ್ಠಾನದಿಂದ ವಿವಿಧ ಕ್ಷೇತ್ರಗಳ ಸಾಧಕರಿಗೆ ಸಾಹಿತ್ಯ ಶ್ರೀ, ಮಿರ್ಜಿ ಅಣ್ಣಾರಾಯ ಕಾವ್ಯ ಹಾಗೂ ಸದ್ಗುರು ಕಾಯಕ ಶ್ರೀ ಪ್ರಶಸ್ತಿಯನ್ನು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಭಾನುವರ ಪ್ರದಾನ ಮಾಡಿದರು
ಬೆಳಗಾವಿಯಲ್ಲಿ ಸದ್ಗುರು ಸಾಹಿತ್ಯ ಪ್ರತಿಷ್ಠಾನದಿಂದ ವಿವಿಧ ಕ್ಷೇತ್ರಗಳ ಸಾಧಕರಿಗೆ ಸಾಹಿತ್ಯ ಶ್ರೀ, ಮಿರ್ಜಿ ಅಣ್ಣಾರಾಯ ಕಾವ್ಯ ಹಾಗೂ ಸದ್ಗುರು ಕಾಯಕ ಶ್ರೀ ಪ್ರಶಸ್ತಿಯನ್ನು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಭಾನುವರ ಪ್ರದಾನ ಮಾಡಿದರು   

ಬೆಳಗಾವಿ: ‘ಕವಿ, ಲೇಖಕರು ದೇಶದ ಪ್ರಚಲಿತ ಸಮಸ್ಯೆಗಳಿಗೆ ಸ್ಪಂದಿಸಿ ಸಾಹಿತ್ಯ ರಚಿಸಬೇಕು. ಸಾಮಾಜಿಕ ಬದಲಾವಣೆಗಳಿಗೆ ಸಾಹಿತಿಗಳು ಹಾಗೂ ಬುದ್ಧಿಜೀವಿಗಳ ಮಾರ್ಗದರ್ಶನ ಅವಶ್ಯವಾಗಿದೆ’ ಎಂದು ರೈಲ್ವೆ ಖಾತೆ ರಾಜ್ಯ ಖಾತೆ ಸಚಿವ ಸುರೇಶ ಅಂಗಡಿ ಹೇಳಿದರು.

ಸದ್ಗುರು ಸಾಹಿತ್ಯ ಪ್ರತಿಷ್ಠಾನ, ಅಥಣಿಯ ಚಿನ್ಮಯ ಪ್ರಕಾಶನದ ವತಿಯಿಂದ ಇಲ್ಲಿ ಭಾನುವಾರ ಆಯೋಜಿಸಿದ್ದ ವಿಶ್ವ ಶೈಕ್ಷಣಿಕ ದಿನಾಚರಣೆ, ಕವಿ ಕಾವ್ಯ ಸಮ್ಮೇಳನ, ಸಾಹಿತ್ಯ ಶ್ರೀ ಮಿರ್ಜಿ ಅಣ್ಣಾರಾಯ ಕಾವ್ಯ ಹಾಗೂ ಸದ್ಗುರು ಕಾಯಕ ಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

‘ದೇಶದ ಸದ್ಯದ ಆಂದೋಲನವಾಗಿರುವ ಪ್ಲಾಸ್ಟಿಕ್ ಮುಕ್ತ ಭಾರತಕ್ಕೆ ಸರ್ವರೂ ಕೈಜೋಡಿಸಬೇಕು’ ಎಂದರು.ಸಾನ್ನಿಧ್ಯ ವಹಿಸಿದ್ದ ಮುಕ್ತಿಮಠದ ಶಿವಸಿದ್ಧ ಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ‘ದುಷ್ಠರ ಸಂಹಾರಕ್ಕೆ ರೂಪ ತಾಳಿದ ಜಗನ್ಮಾತೆ ದುರ್ಗಾದೇವಿಯ ಆರಾಧನೆ ಮಾಡುವ ಹಬ್ಬವೇ ನಾಡಹಬ್ಬವಾಗಿದೆ. ಪ್ರತಿಯೊಬ್ಬರೂ ಉತ್ತಮ ನಡೆ-ನುಡಿ ಆದರ್ಶ ಗುಣಗಳನ್ನು ಮೈಗೂಡಿಸಿಕೊಂಡು ಜೀವನ ಸಾಗಿಸಬೇಕು’ ಎಂದು ತಿಳಿಸಿದರು.

ADVERTISEMENT

‘ನಿನ್ನ ಧ್ಯಾನದಲ್ಲಿ’ ಹಾಗೂ ‘ಅಪರಾಧಿ ನಾನಲ್ಲ’ ಎಂಬ ಕೃತಿಗಳನ್ನು ಬಿಡುಗಡೆ ಮಾಡಲಾಯಿತು.ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಆಶಾ ಐಹೊಳೆ ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರಿನ ಕೊಟ್ರೇಶ ಉಪ್ಪಾರ, ಡಾ.ಸದಾನಂದ ಬಿಳ್ಳೂರು, ರೈತ ಹೋರಾಟಗಾರ ಕಲ್ಯಾಣರಾವ್ ಮುಚಳಂಬಿ, ಗದಗದ ಎ.ಎಸ್. ಮಕಾನದಾರ, ಡಾ.ಎಂ. ಗದಿಗೆಪ್ಪಗೌಡರ, ಪ್ರಾಚಾರ್ಯ ಗಂಗಾಧರ ಎನ್. ಮರಳಹಳ್ಳಿ ಇದ್ದರು.

ಶಿಕ್ಷಕಿಯರಾದ ಕುಲಕರ್ಣಿ ಹಾಗೂ ರೇಖಾ ಅಂಗಡಿ ಪ್ರಾರ್ಥಿಸಿದರು. ಅರುಣಕುಮಾರ ರಾಜಮಾನೆ ಸ್ವಾಗತಿಸಿದರು. ಸದ್ಗುರು ಸಾಹಿತ್ಯ ಪ್ರತಿಷ್ಠಾನದ ಅಧ್ಯಕ್ಷ ಬಸವರಾಜ ಸುಣಗಾರ ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕಿ ಶೋಭಾ ದೇಸಿಂಗೆ ನಿರೂಪಿಸಿದರು. ಶಿಕ್ಷಕ ಮಹಾಂತೇಶ ಪಾಟೀಲ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.