ADVERTISEMENT

ಯಮಕನಮರಡಿ | ಮರಳು ಅಡ್ಡೆಗಳ ಮೇಲೆ ದಾಳಿ: ಜೆಸಿಬಿ ವಶ

​ಪ್ರಜಾವಾಣಿ ವಾರ್ತೆ
Published 20 ಜೂನ್ 2025, 13:49 IST
Last Updated 20 ಜೂನ್ 2025, 13:49 IST
<div class="paragraphs"><p>ಯಮಕನಮರಡಿ ಸಮೀಪ ಹಿಡಕಲ್ ಜಲಾಶಯದ ಹಿನ್ನೀರಿನ ಪ್ರದೇಶದಲ್ಲಿ&nbsp;ಮರಳು ದಂದೆ ಅಡ್ಡೆಗಳ ಮೇಲೆ ಗುರುವಾರ ಬೆಳಗಾವಿ ಉಪವಿಭಾಗಾಧಿಕಾರಿ ಶ್ರವಣ ನಾಯಿಕ, ಗೋಕಾಕ ಡಿಎಸ್‌ಪಿ ರವಿ ನಾಯಿಕ, ಹುಕ್ಕೇರಿ ತಹಶೀಲ್ದಾರ್‌ ಮಂಜುಳಾ ನಾಯಿಕ ನೇತೃತ್ವದಲ್ಲಿ ದಾಳಿ ನಡೆಯಿತು&nbsp;</p></div>

ಯಮಕನಮರಡಿ ಸಮೀಪ ಹಿಡಕಲ್ ಜಲಾಶಯದ ಹಿನ್ನೀರಿನ ಪ್ರದೇಶದಲ್ಲಿ ಮರಳು ದಂದೆ ಅಡ್ಡೆಗಳ ಮೇಲೆ ಗುರುವಾರ ಬೆಳಗಾವಿ ಉಪವಿಭಾಗಾಧಿಕಾರಿ ಶ್ರವಣ ನಾಯಿಕ, ಗೋಕಾಕ ಡಿಎಸ್‌ಪಿ ರವಿ ನಾಯಿಕ, ಹುಕ್ಕೇರಿ ತಹಶೀಲ್ದಾರ್‌ ಮಂಜುಳಾ ನಾಯಿಕ ನೇತೃತ್ವದಲ್ಲಿ ದಾಳಿ ನಡೆಯಿತು 

   

ಯಮಕನಮರಡಿ: ಹಿಡಕಲ್ ಜಲಾಶಯದ ಹಿನ್ನೀರಿನ ಪ್ರದೇಶದಲ್ಲಿ ಮರಳು ದಂದೆ ಅಡ್ಡೆಗಳ ಮೇಲೆ ಗುರುವಾರ ಬೆಳಗಾವಿ ಉಪವಿಭಾಗಾಧಿಕಾರಿ ಶ್ರವಣ ನಾಯಿಕ, ಗೋಕಾಕ ಡಿಎಸ್‌ಪಿ ರವಿ ನಾಯಿಕ, ಹುಕ್ಕೇರಿ ತಹಶೀಲ್ದಾರ್‌ ಮಂಜುಳಾ ನಾಯಿಕ ನೇತೃತ್ವದಲ್ಲಿ ದಾಳಿ ನಡೆಯಿತು. 

ಚಿಕ್ಕಲದಿನ್ನಿ ಅರಣ್ಯ ಪ್ರದೇಶದಲ್ಲಿ ಜೆಸಿಬಿ ಸಹಾಯದಿಂದ ಮಣ್ಣು ಅಗೆಯುತ್ತಿದ್ದ ಜೆಸಿಬಿ ಮತ್ತು ಟಾಟಾ ಸೊಮೊವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇತರ ಪ್ರದೇಶದಲ್ಲಿನ ಮರಳನ್ನು ಜೆಸಿಬಿ ಸಹಾಯದಿಂದ ಸಮತಟ್ಟ ಮಾಡಿಸಲಾಗಿದೆ.

ADVERTISEMENT

ಈ ಪ್ರದೇಶದಲ್ಲಿ ಮರಳು ದಂದೆ ನಡೆಯುತ್ತಿರುವ ಬಗ್ಗೆ ಸಾರ್ವಜನಿಕರು ದೂರು ನೀಡಿದ ಕಾರಣ ದಾಳಿ ನಡೆಯಿತು. ಯಮಕನಮರಡಿ ಸಿಪಿಐ ಜಾವೇದ್‌, ಮುಷಾಪುರಿ, ಯಮಕನಮರಡಿ ಕಂದಾಯ ನೀರಿಕ್ಷಕ ಸಿ.ಕೆ. ಕಲಕಾಂಬಕರ, ಪಾಶ್ಚಾಪುರ ತಲಾಠಿ ಪ್ರಕಾಶ ನಾಯಿಕ, ಜಗದೀಶ ಕಿತ್ತೂರ, ಡಿ.ಎ. ಕಿಲ್ಲೆದಾರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.