ಯಮಕನಮರಡಿ: ಮೀನುಗಾರನೊಬ್ಬನು ಹಿಡಕಲ್ ಜಲಾಶಯದ ಹಿನ್ನೀರಿನ ಮಾಸ್ತಿಹೊಳಿ, ಗುಡಗನಟ್ಟಿ ಪ್ರದೇಶದ ಬಳಿ ಮೀನು ಹಿಡಿಯಲು ಹೋದಾಗ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಬುಧವಾರ ನಡೆದಿದೆ.
ಕಲ್ಲಪ್ಪ ಮಾರುತಿ ಬರಗಾಲಿ (45) ಮೃತಪಟ್ಟವರು. ಹತ್ತರಗಿ ವಲಯ ಅಗ್ನಿಶಾಮಕ ತಂಡವು ಸ್ಥಳಕ್ಕೆ ಧಾವಿಸಿ ಮೀನಗಾರನ ಶವ ಪತ್ತೆ ಮಾಡಿದರು.
ಬೆಳಗಾವಿ ಮೀನಗಾರಿಕೆ ಜಂಟಿ ನಿರ್ದೇಶಕ ಎಲ್.ಕುಮಾರ, ಮೀನುಗಾರಿಕೆ ಉಪನಿರ್ದೇಶಕ ಸಂತೋಷ ಕೊಪ್ಪದ, ಚಿಕ್ಕೋಡಿ ಮೀನುಗಾರಿಕೆ ಸಹಾಯಕ ನಿರ್ದೇಶಕ ರಂಗನಾಥ ಶಿಂಧೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.