ADVERTISEMENT

ಅನಧಿಕೃತ ಡ್ರೈವಿಂಗ್ ಶಾಲೆಗಳ ಮೇಲೆ ದಾಳಿ ನಡೆಸಿದ ಸಾರಿಗೆ ಅಧಿಕಾರಿಗಳು

​ಪ್ರಜಾವಾಣಿ ವಾರ್ತೆ
Published 30 ಮೇ 2018, 13:41 IST
Last Updated 30 ಮೇ 2018, 13:41 IST
ಅನಧಿಕೃತ ಡ್ರೈವಿಂಗ್ ಶಾಲೆಗಳ ಮೇಲೆ ದಾಳಿ ನಡೆಸಿದ ಸಾರಿಗೆ ಅಧಿಕಾರಿಗಳು
ಅನಧಿಕೃತ ಡ್ರೈವಿಂಗ್ ಶಾಲೆಗಳ ಮೇಲೆ ದಾಳಿ ನಡೆಸಿದ ಸಾರಿಗೆ ಅಧಿಕಾರಿಗಳು   

ಬೆಂಗಳೂರು: ಬಹಳಷ್ಟು ದಿನಗಳಿಂದ ಅನಧಿಕೃತವಾಗಿ ಡ್ರೈವಿಂಗ್ ಶಾಲೆಗಳನ್ನು ನಡೆಸುವ ಮೂಲಕ ಸಾರ್ವಜನಿಕರಿಗೆ ಚಾಲನೆ ಪರವಾನಿಗೆ ಮಾಡಿಕೊಡುವುದಾಗಿ ಹೆಚ್ಚಿನ ದರ ಪಡೆದು ವಂಚಿಸುತ್ತಿದ್ದ ಎರಡು ಅಂಗಡಿಗಳ ಮೇಲೆ ಯಲಹಂಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಹಾಗೂ ಅಮೃತಹಳ್ಳಿ ಪೊಲೀಸ್ ಠಾಣಾಧಿಕಾರಿಗಳು ದಾಳಿ ನಡೆಸಿದ್ದಾರೆ.

ಅಮೃತಹಳ್ಳಿಯಲ್ಲಿನ ಮೊಬೈಲ್ ಝೋನ್ ಹಾಗೂ ರಾಥೋಡ್ ಟೂರ್ಸ್ ಅಂಡ್ ಟ್ರಾವೆಲ್ಸ್ ಎಂಬ ಎರಡು ಅಂಗಡಿಗಳ ಮೇಲೆ ದಾಳಿ ನಡೆಸಿ ಒಬ್ಬನನ್ನು ವಶಕ್ಕೆ ಪಡೆಯಲಾಗಿದೆ.

ದಾಳಿಯ ನೇತೃತ್ವ ವಹಿಸಿದ್ದ ಯಲಹಂಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಎನ್ ಎಸ್ ಪ್ರಕಾಶ್ ಮಾತನಾಡಿ, ‘ಕೇಂದ್ರ ಮೋಟಾರು ವಾಹನಗಳ ಕಾಯ್ದೆ 1989ರ ಪ್ರಕಾರ ಡ್ರೈವಿಂಗ್ ಶಾಲೆಗಳು ಸ್ಥಳೀಯ ಪ್ರಾಧಿಕಾರಗಳಿಂದ ಅಗತ್ಯ ಪರವಾನಿಗೆಯನ್ನು ಪಡೆದಿರಬೇಕು. ಅಲ್ಲದೆ, ಆಯಾ ಕಾಲಕ್ಕೆ ನಿಗದಿಪಡಿಸಿದ ದರಪಟ್ಟಿಯ ಆಧಾರದ ಮೇಲೆಯೇ ಸಾರ್ವಜನಿಕರಿಂದ ಹಣವನ್ನು ಪಡೆಯಬೇಕು.

ADVERTISEMENT

ಆದರೆ, ಅಮೃತಹಳ್ಳಿಯ ಮೊಬೈಲ್ ಝೋನ್ ಹಾಗೂ ರಾಥೋಡ್ ಟೂರ್ಸ್ ಅಂಡ್ ಟ್ರಾವೆಲ್ಸ್ ಅಂಗಡಿಗಳು ಅನಧಿಕೃತವಾಗಿ ಚಾಲನೆ ಪರವಾನಿಗೆ ನೀಡುವುದಾಗಿ ಪ್ರಚಾರ ಮಾಡಿರುವುದಲ್ಲದೆ, ಸಾರ್ವಜನಿಕರಿಂದ ಹೆಚ್ಚು ಹಣವನ್ನು ವಸೂಲಿ ಮಾಡುತ್ತಿರುವುದರ ಬಗ್ಗೆ ಬಂದ ದೂರನ್ನು ಆಧರಿಸಿ ಈ ದಾಳಿ ನಡೆಸಲಾಯಿತು.

ಅಮೃತಹಳ್ಳಿ ಪೊಲೀಸ್ ಠಾಣಾಧಿಕಾರಿಗಳು ದಾಖಲಾತಿಗಳನ್ನು ವಶಪಡಿಸಿಕೊಂಡಿದ್ದು, ಆಯಾ ಅಂಗಡಿಗಳ ಮಾಲೀಕರ ಮೇಲೆ ದೂರನ್ನು ದಾಖಲಿಸಲಾಗಿದೆ. ತನಿಖೆಯ ನಂತರ ಇನ್ನೂ ಹೆಚ್ಚಿನ ಮಾಹಿತಿಯನ್ನು ನೀಡಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.