ADVERTISEMENT

‘ಆಟಿಸಂ ಮಕ್ಕಳು ಸಮಾಜದೊಂದಿಗೆ ಬೆರೆಯಲಿ’

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2018, 20:22 IST
Last Updated 4 ಮಾರ್ಚ್ 2018, 20:22 IST
ಸಮ್ಮೇಳನದಲ್ಲಿ ಪಾಲ್ಗೊಂಡಿದ್ದ ವೈದ್ಯರು ಮತ್ತು ಪೋಷಕರು
ಸಮ್ಮೇಳನದಲ್ಲಿ ಪಾಲ್ಗೊಂಡಿದ್ದ ವೈದ್ಯರು ಮತ್ತು ಪೋಷಕರು   

ಬೆಂಗಳೂರು: ಬಿಹೇವಿಯರ್‌ ಮೊಮೆಂಟಮ್‌ ಇಂಡಿಯಾ (ಬಿಎಂಐ) ಫೌಂಡೇಷನ್‌ ವತಿಯಿಂದ ನಗರದಲ್ಲಿ ಏರ್ಪಡಿಸಿದ್ದ ‘ಅಂತರರಾಷ್ಟ್ರೀಯ ಸ್ವಲೀನತೆ (ಆಟಿಸಂ) ಸಮ್ಮೇಳನ’ ಭಾನುವಾರ ಸಂಪನ್ನಗೊಂಡಿತು.

ಮಕ್ಕಳಲ್ಲಿ ಆಟಿಸಂ ಜತೆಗೆ  ಬುದ್ಧಿಮಾಂದ್ಯತೆ, ಅತಿಯಾದ ಕ್ರಿಯಾಶೀಲತೆ, ಚಲನವಲನದ ಅಡೆತಡೆಗಳು, ಮೂರ್ಛೆ, ಕಲಿಕೆಯಲ್ಲಿ ತೊಂದರೆ, ಶ್ರವಣ ಅಥವಾ ದೃಷ್ಟಿ ಸಮಸ್ಯೆಗಳೂ ಕಾಣಿಸಿಕೊಳ್ಳಬಹುದು. ಇಂತಹ ಸಮಸ್ಯೆಗಳಿದ್ದರೆ ಮಕ್ಕಳ ಪೋಷಕರು ಗೊಂದಲಕ್ಕೊಳಗಾಗುತ್ತಾರೆ. ಅವರ ಭಾವನೆಗಳೇನು ಎಂದು ಗುರುತಿಸಲು ಸಾಧ್ಯವಾಗುವುದಿಲ್ಲ ಎಂದು ನಿಮ್ಹಾನ್ಸ್‌ನ ನಿವೃತ್ತ ವೈದ್ಯೆ ಡಾ.ಶೋಭಾ ಶ್ರೀನಾಥ್‌ ತಿಳಿಸಿದರು.

ಸ್ವಲೀನತೆ ಸಮಸ್ಯೆ ಹೊಂದಿರುವ ಮಕ್ಕಳನ್ನು ಸಮಾಜದ ಹೊರಗಿಡುವುದು ಸರಿಯಲ್ಲ. ಸಮಾಜದೊಂದಿಗೆ ಬೆರೆಯಲು ಅವಕಾಶ ಮಾಡಿಕೊಡಬೇಕು ಎಂದು ಸಲಹೆ ನೀಡಿದರು.

ADVERTISEMENT

ಮಕ್ಕಳ ತಜ್ಞರಾದ ಡಾ.ಜೀಸನ್ ಸಿ. ಉನ್ನಿ  ಹಾಗೂ ಡಾ.ಪೂಜಾ ಕಪೂರ್‌ ಸ್ವಲೀನತೆ ಸಮಸ್ಯೆ ನಿವಾರಣೆಯಲ್ಲಿ ಔಷಧ ಪಾತ್ರದ ಕುರಿತು ವಿವರಿಸಿದರು. ರಾಜ್ಯದ ವಿವಿಧ ಜಿಲ್ಲೆಗಳ 47 ವೈದ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.