ADVERTISEMENT

ಇರಾನಿ ಗ್ಯಾಂಗ್‌ನ ಸದಸ್ಯರ ಸೆರೆ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2018, 19:46 IST
Last Updated 14 ಏಪ್ರಿಲ್ 2018, 19:46 IST

ಬೆಂಗಳೂರು: ಮನೆಗಳಿಗೆ ಕನ್ನ ಹಾಕುತ್ತಿದ್ದ ಹಾಗೂ ಮಹಿಳೆಯರ ಸರಗಳವು ಮಾಡುತ್ತಿದ್ದ ಆರೋಪದಡಿ ಇರಾನಿ ಗ್ಯಾಂಗ್‌ನ ಸದಸ್ಯರಿಬ್ಬರನ್ನು ಹೆಣ್ಣೂರು ಪೊಲೀಸರು ಬಂಧಿಸಿದ್ದಾರೆ.‌

ಮಹಾರಾಷ್ಟ್ರದ ಅಲ್ರೇನ್‌ ನಗರದ ಫರ್ಮಾನ್‌ ಅಲಿ (25) ಹಾಗೂ ಕಲಬುರ್ಗಿಯ ಬಾಕರ್‌ ಅಲಿ (30) ಬಂಧಿತರು. ಅವರಿಂದ ₹31.92 ಲಕ್ಷ ಮೌಲ್ಯದ 1.83 ಕೆ.ಜಿ ತೂಕದ ಚಿನ್ನದ ಆಭರಣ ಜಪ್ತಿ ಮಾಡಲಾಗಿದೆ.

‘ಒಂದು ವರ್ಷದಿಂದ ಆರೋಪಿಗಳು ಕೃತ್ಯ ಎಸಗುತ್ತಿದ್ದರು. ವಿವಿಧೆಡೆ 22 ಪ್ರಕರಣಗಳು ದಾಖಲಾಗಿವೆ. ಬಸ್‌ ಹಾಗೂ ರೈಲಿನಲ್ಲಿ ನಗರಕ್ಕೆ ಬರುತ್ತಿದ್ದ ಆರೋಪಿಗಳು, ರಸ್ತೆ ಬದಿ ನಿಲ್ಲಿಸುತ್ತಿದ್ದ ಬೈಕ್‌ಗಳನ್ನು ಕದ್ದು, ಅದರಲ್ಲೇ ಸುತ್ತಾಡಿ ಮಹಿಳೆಯರ ಸರಗಳವು ಮಾಡುತ್ತಿದ್ದರು. ಬಳಿಕ, ನಿಲ್ದಾಣಗಳಲ್ಲಿ ಬೈಕ್‌ಗಳನ್ನು ನಿಲ್ಲಿಸಿ ತಮ್ಮೂರಿಗೆ ಹೊರಟು ಹೋಗುತ್ತಿದ್ದರು. ಬಾಗಿಲು ಹಾಕುವ ಮನೆಗಳಿಗೆ ಹೋಗಿ ಬೀಗ ಮುರಿದು ಕಳ್ಳತನ ಮಾಡುತ್ತಿದ್ದರು’ ಎಂದು ಪೊಲೀಸರು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.