ADVERTISEMENT

ಏರ್ ಇಂಡಿಯಾ ವಿಮಾನಗಳ ಹಾರಾಟ ಸಂಖ್ಯೆ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2012, 19:30 IST
Last Updated 4 ಏಪ್ರಿಲ್ 2012, 19:30 IST

ಬೆಂಗಳೂರು: ಏರ್ ಇಂಡಿಯಾ ಏ. 4ರಿಂದ ತನ್ನ ವಿಮಾನಗಳ ಹಾರಾಟಗಳ ಸಂಖ್ಯೆಯನ್ನು ಹೆಚ್ಚಿಸಿದೆ.
ಪ್ರಯಾಣಿಕರ ಒತ್ತಾಯದ ಮೇರೆಗೆ ರಜೆಯ ದಿನಗಳಲ್ಲಿ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ರನ್‌ವೇ ನವೀಕರಣವಾದ ಹಿನ್ನೆಲೆಯಲ್ಲಿ ಏರ್ ಇಂಡಿಯಾ ಅತಿ ಹೆಚ್ಚು ಪ್ರಯಾಣಿಕರನ್ನು ಹೊತ್ತೊಯ್ಯುವ ಸಾಮರ್ಥ್ಯದ ವಿಮಾನಗಳ ಹಾರಾಟವನ್ನು ಪ್ರಾರಂಭಿಸಿದೆ.

ಬೆಂಗಳೂರಿನಿಂದ ಮಾಲ್ಡೀವ್ಸ್ ಗೆ ದಿನದಲ್ಲಿ ಎರಡು ವಿಮಾನಗಳ ಹಾರಾಟ ನಡೆಸುತ್ತಿದ್ದು, ಒಂದು ವಿಮಾನವು ನೇರವಾಗಿ ಮಾಲ್ಡೀವ್ಸ್ ತಲುಪಿದರೆ, ಇನ್ನೊಂದು ತಿರುವನಂತಪುರದಿಂದ ತಲುಪಲಿದೆ. ಮಾಲ್ಡೀವ್ಸ್‌ನಿಂದ ವಾಪಸ್ಸಾಗಲು ವಿಮಾನದ ವ್ಯವಸ್ಥೆಯಿರುವುದರಿಂದ ಕರ್ನಾಟಕದ ಬೇರೆ ಬೇರೆ ಭಾಗಗಳ ಜನರು ಅಂದೇ ತಲುಪುವ ಸಾಧ್ಯತೆಯಿದೆ.

ದೆಹಲಿಗೆ  ಬೆಳಿಗ್ಗೆ ಎರಡು, ಮಧ್ಯಾಹ್ನ ಒಂದು ಹಾಗೂ ಸಂಜೆ ಎರಡರಂತೆ ಒಟ್ಟು ಐದು ವಿಮಾನಗಳು ಹಾರಾಟ ನಡೆಸಲಿವೆ. ಅಲ್ಲದೆ, ಬೆಂಗಳೂರಿನಿಂದ ಪ್ರತಿದಿನ ನಾಲ್ಕು ವಿಮಾನಗಳು ಬೆಳಿಗ್ಗೆ ಮತ್ತು ಸಂಜೆ ಮುಂಬೈಗೆ ಹಾರಾಡಲಿವೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.