ADVERTISEMENT

ಕಾವೇರಿ ನಾಲ್ಕನೇ ಘಟ್ಟ: ನೀರು ಪೂರೈಕೆಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2012, 19:00 IST
Last Updated 3 ಅಕ್ಟೋಬರ್ 2012, 19:00 IST

ಬೆಂಗಳೂರು: ಕಾವೇರಿ ನಾಲ್ಕನೇ ಘಟ್ಟ ಎರಡನೇ ಹಂತದ ಪ್ರಾಯೋಗಿಕ ನೀರು ಪೂರೈಕೆಗೆ ಬುಧವಾರ ಜಲಮಂಡಳಿ ಚಾಲನೆ ನೀಡಿದೆ. ಇದರಿಂದ ಮುಂದಿನ ವಾರದಿಂದ ನಗರಕ್ಕೆ ಹೆಚ್ಚುವರಿ ನೀರು ಪೂರೈಕೆಯಾಗಲಿದೆ.

ತಾತಗುಣಿಯಿಂದ ಜಂಬುಸವಾರಿ ದಿಣ್ಣೆಗೆ ಪ್ರಾಯೋಗಿಕವಾಗಿ ಹೊಸ ಪೈಪ್‌ಲೈನ್‌ಗಳಲ್ಲಿ ನೀರು ಪೂರೈಸಲಾಗುತ್ತಿದ್ದು, ನಗರದ ಪಶ್ಚಿಮ ಮತ್ತು ಪೂರ್ವ ವಿಭಾಗಗಳ ಸಂಗ್ರಹಾಗಾರಗಳಿಗೆ ನೀರು ಹರಿಸಲಾಗುತ್ತಿದೆ.

`ತಮಿಳುನಾಡಿಗೆ ಕಾವೇರಿ ನೀರು ಬಿಡುತ್ತಿರುವುದನ್ನು ವಿರೋಧಿಸಿ ಮಂಡ್ಯ ಜಿಲ್ಲೆಯ ರೈತರು ಪ್ರತಿಭಟನೆ ನಡೆಸುತ್ತಿರುವುದರಿಂದ ನಗರದ ನೀರು ಪೂರೈಕೆಗೆ ತೊಂದರೆಯಾಗುವುದಿಲ್ಲ. ಬೆಂಗಳೂರಿನ ಜನರು ಪ್ರತಿಭಟನೆಗೆ ಬೆಂಬಲ ನೀಡುತ್ತಿಲ್ಲ ಎಂದು ಆಕ್ರೋಶಗೊಂಡ ರೈತರು ಮಂಗಳವಾರ ತೊರೆಕಾಡನಹಳ್ಳಿಯ ಪಂಪಿಂಗ್ ಹೌಸ್‌ಗೆ ಮುತ್ತಿಗೆ ಹಾಕಿ ಪಂಪ್‌ಗಳನ್ನು ಸುಮಾರು 30 ನಿಮಿಷಗಳ ಕಾಲ ಸ್ಥಗಿತಗೊಳಿಸಿದ್ದರು. ಆದರೆ, ಇದರಿಂದ ಹೆಚ್ಚಿನ ತೊಂದರೆಯಾಗಿಲ್ಲ~ ಎಂದು ಜಲಮಂಡಳಿ ಅಧಿಕಾರಿಗಳು ಹೇಳಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.