ADVERTISEMENT

ಗೀಳು ಬೇನೆ: 28ಕ್ಕೆ ವಿಚಾರಸಂಕಿರಣ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2017, 20:16 IST
Last Updated 25 ಅಕ್ಟೋಬರ್ 2017, 20:16 IST

ಬೆಂಗಳೂರು: ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆಯು (ನಿಮ್ಹಾನ್ಸ್‌) ಇದೇ 28ರಂದು ನಿಮ್ಹಾನ್ಸ್‌ನ ಸಮ್ಮೇಳನ ಸಭಾಂಗಣದಲ್ಲಿ ‘ಗೀಳು ಬೇನೆ (ಒಸಿಡಿ) ಸಂಬಂಧಿತ ಸಮಸ್ಯೆಗಳು ಮತ್ತು ಸಂಶೋಧನೆಗಳು’ ಕುರಿತ ವಿಚಾರಸಂಕಿರಣ ಆಯೋಜಿಸಿದೆ.

ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ನಿಮ್ಹಾನ್ಸ್‌ನ ಮನೋವೈದ್ಯಕೀಯ ವಿಭಾಗದ ಪ್ರಾಧ್ಯಾಪಕ ಡಾ. ಜನಾರ್ದನ ರೆಡ್ಡಿ, ‘ವಿವಿಧ ದೇಶಗಳ ಮನೋವೈದ್ಯರು ವಿಷಯ ಮಂಡಿಸುತ್ತಾರೆ’ ಎಂದರು.

‘ದೇಶದಲ್ಲಿ ಶೇ 3ರಷ್ಟು ಜನರು ಗೀಳು ಬೇನೆಯಿಂದ ಬಳಲುತ್ತಿದ್ದಾರೆ. 15 ರಿಂದ 30 ವಯಸ್ಸಿನವರಲ್ಲಿ ಇದು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಇತ್ತೀಚಿನ ದಿನಗಳಲ್ಲಿ ಒಸಿಡಿ ಸಂಬಂಧಿತ ಅನೇಕ ಸಂಶೋಧನೆಗಳು ನಡೆದಿವೆ. ಈ ರೋಗಿಗಳಿಗೆ ಮಾತ್ರೆಗಳು ಹಾಗೂ ವಿವಿಧ ಬಗೆಯ ಚಿಕಿತ್ಸೆಗಳನ್ನು ನೀಡಲಾಗುತ್ತಿದೆ. ಇನ್ನೂ ಕೆಲವು ಪ್ರಕರಣಗಳಲ್ಲಿ ಮೆದುಳಿನ ಶಸ್ತ್ರ ಚಿಕಿತ್ಸೆ ಮೂಲಕ ಗುಣಪಡಿಸಲಾಗುತ್ತದೆ’ ಎಂದು ಮಾಹಿತಿ ನೀಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.