ADVERTISEMENT

ಚುನಾವಣೆ : ನಿಯಂತ್ರಣಾ ಕೊಠಡಿ ಸ್ಥಾಪನೆ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2018, 19:30 IST
Last Updated 5 ಏಪ್ರಿಲ್ 2018, 19:30 IST

ಬೆಂಗಳೂರು: ಚುನಾವಣೆ ಉದ್ದೇಶಕ್ಕಾಗಿ ಹಣ ಸಾಗಣೆ ಮಾಡುವುದರ ಮೇಲೆ ನಿಗಾ ಇಡಲು ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ಆದಾಯ ತೆರಿಗೆ ಇಲಾಖೆ ನಿಯಂತ್ರಣಾ ಕೊಠಡಿ ಸ್ಥಾಪನೆ ಮಾಡಿದೆ.

ರಾಜ್ಯದ ಪ್ರತಿಯೊಂದು ವಿಧಾನಸಭಾ ಕ್ಷೇತ್ರದಲ್ಲೂ ಹಣದ ಸಾಗಣೆ ಮೇಲೆ ಕಣ್ಣಿಡಲಾಗುವುದು. ಇದಕ್ಕಾಗಿ 24X7 ಕಾರ್ಯ ನಿರ್ವಹಿಸುವ ನಿಯಂತ್ರಣಾ ಕೊಠಡಿಯನ್ನು ಬೆಂಗಳೂರಿನ ಕ್ವೀನ್ಸ್‌ ರಸ್ತೆಯಲ್ಲಿರುವ ಸಿ.ಆರ್‌.ಬಿಲ್ಡಿಂಗ್‌ನಲ್ಲಿ ಸ್ಥಾಪಿಸಲಾಗಿದೆ. ಇಲ್ಲಿ ಎಲ್ಲ ಬಗೆಯ ದೂರು ಮತ್ತು ಮಾಹಿತಿಗಳನ್ನು ಸ್ವೀಕರಿಸಲಾಗುತ್ತದೆ.

ಟೋಲ್‌ ಫ್ರಿ ನಂ 18004252115, ದೂರವಾಣಿ ನಂ– 08022861126, ಮೊಬೈಲ್ 8277413614 / 8277422825, ಇಮೇಲ್: cleankarnatakaelection@incometax.gov.in

ADVERTISEMENT

ತ್ಯಾಗರಾಜನಗರದಲ್ಲಿ ಕಚೇರಿ: ಬಸವನಗುಡಿ ಕ್ಷೇತ್ರದ ಚುನಾವಣಾಧಿಕಾರಿ ಕಚೇರಿಯನ್ನು ತ್ಯಾಗರಾಜನಗರದ ಎಸ್‌.ಎಸ್‌.ಎಂ. ಶಾಲೆ ಎದುರಿನ ಪಾಲಿಕೆ ಕಚೇರಿಯ ಒಂದನೇ ಮಹಡಿಯಲ್ಲಿ ತೆರೆಯಲಾಗಿದೆ ಎಂದು ಚುನಾವಣಾಧಿಕಾರಿ ಡಾ.ಸುಧಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಂಪರ್ಕ: 080-26690230

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.