ADVERTISEMENT

ಜೆಡಿಎಸ್ ಏಕೈಕ ರೈತರ ಪಕ್ಷ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2012, 19:30 IST
Last Updated 19 ನವೆಂಬರ್ 2012, 19:30 IST

ಪೀಣ್ಯ ದಾಸರಹಳ್ಳಿ: `ರಾಜ್ಯದಲ್ಲಿ ಜೆಡಿಎಸ್ ಮಾತ್ರ ರೈತರ ಪರ ನಿಲುವನ್ನು ಇಟ್ಟುಕೊಂಡಿರುವ ಪಕ್ಷ. ಹೀಗಾಗಿ ನನ್ನಂತಹ ನೂರಾರು ರೈತ ಮಕ್ಕಳು ಜನನಾಯಕರಾಗಿ ಹೊರಹೊಮ್ಮಲಿದ್ದಾರೆ~ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ವಿಶ್ಲೇಷಿಸಿದರು.

ದೊಡ್ಡಬಿದರಕಲ್ಲಿನ ಸಪ್ತಗಿರಿ ಬಡಾವಣೆಯಲ್ಲಿ ಭಾನುವಾರ ನಡೆದ ಜೆಡಿಎಸ್ ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮಾತನಾಡಿದರು. ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, `ಟೀಕೆಗಳನ್ನು ಮಾಡುವ ನಾಯಕರಿಗೆ ಮುಂದಿನ ಚುನಾವಣೆಯಲ್ಲಿ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ~ ಎಂದು ಎಚ್ಚರಿಸಿದರು.

ಶಾಸಕರಾದ ಬಾಲಕೃಷ್ಣ, ಇ.ಕೃಷ್ಣಪ್ಪ, ಪಾಲಿಕೆ ಸದಸ್ಯರಾದ ಗಾಯಿತ್ರಿ ಜವರಾಯಿಗೌಡ, ತಿಮ್ಮನಂಜಯ್ಯ, ಮುನಿಸ್ವಾಮಿ, ಗೋವಿಂದೇಗೌಡ,  ಜವರಾಯಿಗೌಡ, ನಗರ ಜಿಲ್ಲಾ ಘಟಕದ ಅಧ್ಯಕ್ಷ ಅಂದಾನಪ್ಪ  ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.