ADVERTISEMENT

ಜ್ಞಾನಭಾರತಿ: ಡಿಜಿಟಲ್‌ ಸರ್ವೇಗೆ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2019, 20:23 IST
Last Updated 14 ಸೆಪ್ಟೆಂಬರ್ 2019, 20:23 IST

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಕ್ಯಾಂಪಸ್‌ ಪ್ರದೇಶವನ್ನು ₹ 28 ಲಕ್ಷ ವೆಚ್ಚದಲ್ಲಿ ಡಿಜಿಟಲ್‌ ಸರ್ವೇ ಮಾಡಿಸುವ ನಿರ್ಧಾರಕ್ಕೆ ಆಕ್ಷೇಪ ಕೇಳಿಬಂದಿದೆ.

ಇತ್ತೀಚೆಗೆ ನಡೆದ ಸಿಂಡಿಕೇಟ್ ಸಭೆಯಲ್ಲಿ ಭೌಗೋಳಿಕ ಗುರುತು ಮಾಡಿಕೊಳ್ಳುವುದಕ್ಕಾಗಿ ಡಿಜಿಟಲ್ ಸರ್ವೇ ಮಾಡುವ ನಿರ್ಧಾರಕ್ಕೆ ಬರಲಾಗಿತ್ತು. ಇದಕ್ಕೆ ಇಷ್ಟು ವೆಚ್ಚ ಮಾಡುವುದು ವ್ಯರ್ಥ ಎಂದು ಕೆಲವು ಹಿರಿಯ ಪ್ರೊಫೆಸರ್‌ಗಳು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

‘ವಿದ್ಯಾರ್ಥಿಗಳ ಸುರಕ್ಷತೆ ಮತ್ತು ಇತರ ಹಲವು ವಿಷಯಗಳನ್ನು ಬಗೆಹರಿಸುವುದು ಬಾಕಿ ಇದೆ. ಇದರ ಬಗ್ಗೆ ಗಮನಹರಿಸಬೇಕಿತ್ತು. ವಿಶ್ವವಿದ್ಯಾಲಯದ ಹಲವು ಎಕರೆ ಭೂಮಿಯನ್ನು ಅತಿಕ್ರಮಿಸಿಕೊಳ್ಳಲಾಗಿದ್ದು, ಇಂತಹ ಜಮೀನು ವಾಪಸ್‌ ಪಡೆಯುವುಕ್ಕಾಗಿ ಕಾನೂನು ಹೋರಾಟಕ್ಕೆ ಈ ಹಣವನ್ನು ಬಳಸಬಹುದಿತ್ತು’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.