ADVERTISEMENT

ತುಳು ಭಾಷೆ ಸಂವಿಧಾನ ಸೇರ್ಪಡೆಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2013, 19:41 IST
Last Updated 25 ಸೆಪ್ಟೆಂಬರ್ 2013, 19:41 IST

ಬೆಂಗಳೂರು: ತುಳು ಭಾಷೆಯನ್ನು ಸಂವಿ ಧಾನದ 8 ನೇ ಪರಿಚ್ಛೇದದಲ್ಲಿ ಸೇರ್ಪಡೆ ಗೊಳಿಸಬೇಕು ಎಂದು ಒತ್ತಾಯಿಸಿ ತುಳು ಕನ್ನಡ ಭಾಷಿಗರ ಪರವಾಗಿ ತುಳುವೆರೆ ಚಾವಡಿ ಸಂಘಟನೆ ಯು ಸೆ. 28ರಂದು ಪ್ರತಿಭಟನೆಯನ್ನು ಹಮ್ಮಿಕೊಂಡಿದೆ.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಹಿರಿಯ ಸಾಹಿತಿ ಡಾ.ಡಿ.ಕೆ.ಚೌಟ ಅವರು, ‘ಕಾಸರ ಗೋಡಿನಲ್ಲಿ ತುಳು ಮತ್ತು ಕನ್ನಡ ಭಾಷೆ ಯ ಬಹುಸಂಖ್ಯಾತರಿದ್ದಾರೆ. ಆದರೆ, ಯಾವುದೇ ಸೌಲಭ್ಯಗಳಿಲ್ಲದೆ ವಂಚಿತ ಗೊಂಡಿದ್ದಾರೆ. ಈ ಪ್ರದೇಶದ ಕನ್ನಡ ಮಾಧ್ಯಮದ ಜನರಿಗೆ ಉದ್ಯೋಗಾವ ಕಾಶ ಕಡಿಮೆಯಿದೆ. ಕಾಸರಗೋಡು ಅನ್ನು ರಾಜ್ಯದಲ್ಲಿ ವಿಲೀನಗೊಳಿಸಲು ಕ್ರಮ ಕೈಗೊಳ್ಳಬೇಕು’ ಎಂದು ಅವರು ಒತ್ತಾಯಿಸಿದರು.

‘ಪಂಚದ್ರಾವಿಡ ಭಾಷೆಗಳಲ್ಲಿ ಒಂದಾ ಗಿರುವ ತುಳು ಭಾಷೆಗೆ 2,600 ವರ್ಷ ಗಳ ದೀರ್ಘ ಇತಿಹಾಸವಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಿ ಭಾಷೆ ಗಳು ಸಂವಿಧಾನದ ಎಂಟನೇ ಪರಿಚ್ಛೇದ ದಲ್ಲಿ ಸೇರಿವೆ. ಆದರೆ, ತುಳು ಭಾಷೆಗೆ ಮಾತ್ರ ಇನ್ನೂ ಕೇಂದ್ರ ಸರ್ಕಾರ ದಿಂದ ಮಾನ್ಯತೆಯು ದೊರೆತಿಲ್ಲ. ತುಳು ಭಾಷೆ ಗೆ ತೋರಿರುವ ತಾತ್ಸಾರ ಮನೋಭಾವ ನೆಯಿಂದ ಭಾಷೆಯ ಬೆಳವಣಿಗೆ ಸಾಧ್ಯ ವಾಗಿಲ್ಲ’ ಎಂದು ವಿಷಾದಿಸಿದರು.

‘ತುಳು ಭಾಷೆಗೆ ಸ್ವಂತ ಲಿಪಿಯಿ ದ್ದರೂ, ಲಿಪಿ ಇಲ್ಲದ ಭಾಷೆ ಎಂದು ಹೇಳ ಲಾಗುತ್ತಿದೆ. ಶಿಷ್ಟ ಗ್ರಂಥಗಳ ಕೊರತೆ ಯಿದ್ದರೂ ತುಳುವಿನಲ್ಲಿ ವಿಪುಲ ವಾದ ಸಾಹಿತ್ಯವಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.