ADVERTISEMENT

ದೀನದಯಾಳ್ ಉಪಾಧ್ಯಾಯರ ಸಮಗ್ರ ಬರಹ ಕನ್ನಡಕ್ಕೆ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2012, 18:55 IST
Last Updated 4 ನವೆಂಬರ್ 2012, 18:55 IST

ಬೆಂಗಳೂರು: ಭಾರತೀಯ ಜನಸಂಘದ ಪ್ರಧಾನ ಕಾರ್ಯದರ್ಶಿಯಾಗಿದ್ದ ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ ಸಮಗ್ರ ಬರಹಗಳು ಕನ್ನಡದಲ್ಲಿ ಬರಲಿವೆ.

ಡಾ.ಅಂಬೇಡ್ಕರ್ ಅವರ ಸಮಗ್ರ ಬರಹ ಹಾಗೂ ಭಾಷಣಗಳನ್ನು ಕನ್ನಡಕ್ಕೆ ತಂದಿರುವ ಕುವೆಂಪು ಭಾಷಾ ಭಾರತಿ ಪ್ರಾಧಿಕಾರ, ಈಗ ಉಪಾಧ್ಯಾಯ ಅವರ ಕೃತಿಗಳನ್ನು ಹಿಂದಿ ಮತ್ತು ಇಂಗ್ಲಿಷ್‌ನಿಂದ ಕನ್ನಡಕ್ಕೆ ಅನುವಾದಿಸಿ, ಪ್ರಕಟಿಸುತ್ತಿದೆ.


ಇದೇ 9ರಂದು ನಗರದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರು ದೀನದಯಾಳ್ ಉಪಾಧ್ಯಾಯ ಅವರ ಬರಹಗಳ ಕನ್ನಡ ಅವತರಣಿಕೆ ಮೊದಲ ಐದು ಸಂಪುಟಗಳನ್ನು ಬಿಡುಗಡೆ ಮಾಡಲಿದ್ದಾರೆ.


ಉಪಾಧ್ಯಾಯ ಅವರ ಕೃತಿಗಳನ್ನು ಕನ್ನಡಕ್ಕೆ ತರುವ ಕಾರ್ಯಕ್ಕೆ ಚಾಲನೆ ದೊರೆತಿದ್ದು ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ. ಈ ಕಾರ್ಯಕ್ಕೆ ರೂ 40 ಲಕ್ಷ ಮಂಜೂರಾಗಿತ್ತು. ಅದರಲ್ಲಿ ರೂ 20 ಲಕ್ಷ ವೆಚ್ಚದಲ್ಲಿ ಮೊದಲ ಹಂತದಲ್ಲಿ ಐದು ಸಂಪುಟಗಳನ್ನು ಹೊರತರಲಾಗುತ್ತಿದೆ ಎಂದು ಪ್ರಾಧಿಕಾರದ ಅಧ್ಯಕ್ಷ ಡಾ. ಪ್ರಧಾನ ಗುರುದತ್ತ ತಿಳಿಸಿದರು.

ಉಪಾಧ್ಯಾಯರ ಸಮಗ್ರ ಬರಹ ಕನ್ನಡದಲ್ಲಿ ಪ್ರಕಟವಾಗುತ್ತಿರುವುದು ಇದೇ ಮೊದಲು. ಸುಮಾರು ಹತ್ತು ಸಂಪುಟಗಳಲ್ಲಿ ಇದು ಪ್ರಕಟವಾಗಲಿದೆ. ಜಾರ್ಖಂಡ್‌ಇಂತಹ ಪ್ರಯತ್ನ ನಡೆದಿದೆ ಎಂದರು.

 ಉಪಾಧ್ಯಾಯ ಅವರ ಚಿಂತನೆಗಳು ಹಾಗೂ ಮಹಾತ್ಮ ಗಾಂಧೀಜಿ,  ಜಯಪ್ರಕಾಶ ನಾರಾಯಣ ಅವರ `ಸಂಪೂರ್ಣ ಕ್ರಾಂತಿ~, ರಾಮ ಮನೋಹರ ಲೋಹಿಯಾ, ಕಾರ್ಲ್ ಮಾರ್ಕ್ಸ್ ಚಿಂತನೆಗಳ ಕುರಿತು ನಡೆದಿರುವ ತೌಲನಿಕ ಅಧ್ಯಯನಗಳ ಆಯ್ದ ಬರಹಗಳೂ ಇದರಲ್ಲಿವೆ ಎಂದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.