ADVERTISEMENT

ದೊಮ್ಮಸಂದ್ರ: ಏಕಾದಶಿ ವೈಭವ

​ಪ್ರಜಾವಾಣಿ ವಾರ್ತೆ
Published 11 ಜನವರಿ 2014, 20:18 IST
Last Updated 11 ಜನವರಿ 2014, 20:18 IST

ವೈಟ್‌ಫೀಲ್ಡ್‌: ಸರ್ಜಾಪುರ ರಸ್ತೆಯ ದೊಮ್ಮಸಂದ್ರ ಪುರಾತನ ಪ್ರಸಿದ್ದ ಶ್ರೀದೇವಿ,ಭೂದೇವಿ ಸಮೇತ ರಂಗನಾಥಸ್ವಾಮಿ ದೇವಾಲಯ ಸೇರಿದಂತೆ ಸುತ್ತಮುತ್ತ ಗ್ರಾಮಗಳ ವಿವಿಧ ದೇವಾಲಯಗಳಲ್ಲಿ ವೈಕುಂಠ ಏಕಾದಶಿ ವೈಭವದಿಂದ ಆಚರಿಸ ಲಾಯಿತು.

ರಂಗನಾಥಸ್ವಾಮಿಗೆ ವಿವಿಧ ಅಲಂಕಾರ ಅಭಿಷೇಕ,ಕುಂಕುಮಾರ್ಚನೆ ಮಾಡಲಾಯಿತು.  ಸ್ವಾಮಿಯ ದರ್ಶನ  ಮತ್ತು ವೈಕುಂಠ ದ್ವಾರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿತ್ತು. ನೂಕು ನುಗ್ಗಲಿನಲ್ಲೇ ಸುಮಾರು 20 ಸಾವಿರಕ್ಕೂ ಹೆಚ್ಚು ಭಕ್ತರು ದರ್ಶನ ಪಡೆದರು ಎಂದು  ಪ್ರಧಾನ ಅರ್ಚಕ ರಾಜಗೋಪಾಲ್‌ ತಿಳಿಸಿದರು.

ಇಮ್ಮಡಿಹಳ್ಳಿ: ವಿಶೇಷ ಪೂಜೆ
ಮಹದೇವಪುರ:  ವೈಕುಂಠ ಏಕಾದಶಿ ಪ್ರಯುಕ್ತ ಕ್ಷೇತ್ರದ ಇಮ್ಮಡಿಹಳ್ಳಿ ಗ್ರಾಮದಲ್ಲಿರುವ ಪುರಾತನ ಶ್ರೀವೆಂಕಟೇಶ್ವರ ಸ್ವಾಮಿ ದೇವಾಲಯದಲ್ಲಿ ಶನಿವಾರ ವಿಶೇಷ ಪೂಜೆ, ಹೋಮ ಕಾರ್ಯಕ್ರಮಗಳು ವಿಜೃಂಭಣೆಯಿಂದ ನಡೆಯಿತು.

ಮುಂಜಾನೆ ಸೂರ್ಯೋದಯ ಆಗುತ್ತಿದ್ದಂತೆ ದೇವರಿಗೆ ವಿವಿಧ ಅಭಿಷೇಕಗಳನ್ನು ಮಾಡಲಾಯಿತು. ನಂತರ ಕೆಂಪು, ಬಿಳಿ ಗುಲಾಬಿ, ಸೇವಂತಿಗೆ ಸೇರಿದಂತೆ ಹತ್ತಾರು ನಮೂನೆಯ ಹೂಗಳಿಂದ ದೇವರನ್ನು ಅಲಂಕಾರಗೊಳಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT