ADVERTISEMENT

ನಗರಕ್ಕೆ ಬಂದಿಳಿದ ಯೂರೊಫೈಟರ್ ಟೈಫೂನ್ಸ್ ಯುದ್ಧವಿಮಾನ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2011, 19:25 IST
Last Updated 4 ಫೆಬ್ರುವರಿ 2011, 19:25 IST

ಬೆಂಗಳೂರು: ವೈಮಾನಿಕ ಮೇಳದ ದಿನವು ಸಮೀಪಿಸುತ್ತಿರುವಂತೆ ವಿವಿಧ ದೇಶಗಳ ಪ್ರಮುಖ ವಿಮಾನಗಳು ಉದ್ಯಾನ ನಗರಿಗೆ ಕಾಲಿಡಲು ಆರಂಭಿಸಿವೆ. ಬ್ರಿಟಿಷ್ ವೈಮಾನಿಕ ಕೇಂದ್ರವು ಅಭಿವೃದ್ಧಿ ಪಡಿಸಿದ ‘ಯೂರೊಫೈಟರ್ ಟೈಫೂನ್ಸ್’ ಎರಡು ಯುದ್ಧವಿಮಾನಗಳು ಶುಕ್ರವಾರ ಬಂದಿಳಿದಿವೆ.

ಇದೇ ಮೊದಲ ಬಾರಿಗೆ ಈ ವಿಮಾನಗಳು ‘ಏರೊ ಇಂಡಿಯಾ’ ವೈಮಾನಿಕ ಮೇಳದಲ್ಲಿ ಪಾಲ್ಗೊಳ್ಳುತ್ತಿವೆ. ಯುದ್ಧದ ಸಂದರ್ಭದಲ್ಲಿ ಬಹುವಿಧವಾಗಿ ಬಳಕೆಯಾಗುವ ಈ ವಿಮಾನವನ್ನು ಅತ್ಯಾಧುನಿಕ ತಂತ್ರಜ್ಞಾನದಿಂದ ಅಭಿವೃದ್ಧಿಪಡಿಸಲಾಗಿದೆ.

ಶತ್ರುಗಳ ಮೇಲೆ ಬಿರುಗಾಳಿಯಂತೆ ಎರಗಬಲ್ಲ ಸಾಮರ್ಥ್ಯ ಇದಕ್ಕಿದೆ.

ಅತ್ಯಂತ ಪರಿಣಾಮಕಾರಿಯಾಗಿ ದಾಳಿ ಮಾಡುವ ಸಾಮರ್ಥ್ಯವಿರುವ ಇದು ಇತರ ವಿಮಾನಗಳಿಗೆ ಹೋಲಿಸಿದರೆ ಅಷ್ಟೇನೂ ದುಬಾರಿಯಲ್ಲ ಎಂದು ನಿಮಾರ್ಣ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.