ADVERTISEMENT

ನಗರದಲ್ಲಿ ಮಳೆ: ಉರುಳಿದ ಮರ

​ಪ್ರಜಾವಾಣಿ ವಾರ್ತೆ
Published 16 ಜೂನ್ 2017, 20:32 IST
Last Updated 16 ಜೂನ್ 2017, 20:32 IST
ಜೆ.ಸಿ.ರಸ್ತೆಯ ಕಾರ್ಪೊರೇಷನ್‌ ಕಟ್ಟಡ ಬಳಿ ರಸ್ತೆಯಲ್ಲಿ ನಿಂತಿದ್ದ ನೀರಿನಲ್ಲೇ ವಾಹನಗಳು ಸಂಚರಿಸಿದವು
ಜೆ.ಸಿ.ರಸ್ತೆಯ ಕಾರ್ಪೊರೇಷನ್‌ ಕಟ್ಟಡ ಬಳಿ ರಸ್ತೆಯಲ್ಲಿ ನಿಂತಿದ್ದ ನೀರಿನಲ್ಲೇ ವಾಹನಗಳು ಸಂಚರಿಸಿದವು   

ಬೆಂಗಳೂರು: ನಗರದಲ್ಲಿ ಕೆಲದಿನಗಳ ಕಣ್ಮರೆಯಾಗಿದ್ದ ಮಳೆ ಶುಕ್ರವಾರ ಮತ್ತೆ ಸುರಿಯಿತು. ಬೆಳಿಗ್ಗೆಯಿಂದಲೇ ನಗರದಲ್ಲಿ ಮೋಡ ಕವಿದ ವಾತಾವರಣವಿತ್ತು. ಮಧ್ಯಾಹ್ನ 2.30 ಗಂಟೆಯ ಸುಮಾರಿಗೆ ಆರಂಭವಾದ ಜಿಟಿ ಜಿಟಿ ಮಳೆ  ಅರ್ಧ ತಾಸಿಗೂ ಹೆಚ್ಚು ಕಾಲ ಸುರಿಯಿತು. 

ರಾಜಾಜಿನಗರ, ಮಲ್ಲೇಶ್ವರ, ವಿಜಯನಗರ, ಎಂ.ಜಿ.ರಸ್ತೆ. ಶಿವಾಜಿನರ, ಯಶವಂತಪುರ, ಪೀಣ್ಯ, ಬಸವನಗುಡಿ,  ಮೆಜೆಸ್ಟಿಕ್‌ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ಮಳೆಯಾಗಿದೆ.

ಮಳೆ ವೇಳೆ ಗಾಳಿಯೂ ಜೋರಾಗಿ ಬೀಸಿದ್ದು, ಅದರಿಂದಾಗಿ ವಿಧಾನಸೌಧ ಹಿಂಭಾಗದ ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಕಟ್ಟಡದ ಬಳಿ ಮರವೊಂದು ಉರುಳಿ ಬಿದ್ದಿತು. ಸ್ಥಳಕ್ಕೆ ಹೋದ ಬಿಬಿಎಂಪಿ ಸಿಬ್ಬಂದಿ, ಮರವನ್ನು ತೆರವುಗೊಳಿಸಿದರು.

ಶೇಷಾದ್ರಿಪುರ ಕಾಲೇಜು ಬಳಿ ಮರದ ಕೊಂಬೆ ಬಿದ್ದು, ಕೆಲಕಾಲ ವಾಹನಗಳ ಸಂಚಾರಕ್ಕೆ ತೊಂದರೆ ಉಂಟಾಯಿತು.

‘ಸಂಜೆಯ ಬಳಿಕ ಮಳೆಯಾಗಿಲ್ಲ. ಮರ ಬಿದ್ದಿದ್ದು ಬಿಟ್ಟರೆ ಉಳಿದಂತೆ ಯಾವುದೇ ರೀತಿಯ ಹಾನಿ ಉಂಟಾಗಿಲ್ಲ’ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.