ADVERTISEMENT

ಪ್ರೆಸ್‌ಕ್ಲಬ್ ಭವನ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2012, 19:30 IST
Last Updated 13 ಏಪ್ರಿಲ್ 2012, 19:30 IST

ಬೆಂಗಳೂರು: `ಮಾಹಿತಿ ನೀಡುವ ಭರಾಟೆಯಲ್ಲಿ ಈ ದಿನ ಬೇರೆಯವರಿಗೆ ನೋವಾಗುವಂತಹ ಸುದ್ದಿಗಳು ಪ್ರಸಾರವಾಗುತ್ತಿವೆ. ಈ ರೀತಿ ಆಗಬಾರದು~ ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡರು ಹೇಳಿದರು.
ಶುಕ್ರವಾರ ಪ್ರೆಸ್‌ಕ್ಲಬ್ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ `ಪ್ರೆಸ್‌ಕ್ಲಬ್ ಭವನ~ ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

`ಈ ಪ್ರೆಸ್‌ಕ್ಲಬ್ ಭವನ ನಿರ್ಮಾಣಕ್ಕೆ ಸುಮಾರು ಒಂದು ಕೋಟಿ ಹಣ ವೆಚ್ಚವಾಗಿದೆ~ ಎಂದು ಹೇಳಿದರು.
ಗೃಹ ಮತ್ತು ಸಾರಿಗೆ ಸಚಿವ ಆರ್. ಅಶೋಕ ಮಾತನಾಡಿ, 24 ಗಂಟೆಯೂ ಪತ್ರಕರ್ತರಾಗಿರಬಾರದು. ಏಕೆಂದರೆ, ಅವರಿಗೂ ಒಂದು ಜೀವನವಿದೆ. ಮಾನಸಿಕವಾಗಿ, ದೈಹಿಕವಾಗಿ ಕುಗ್ಗುವಂತಹ ಕೆಲಸವನ್ನು ಮಾಡಬಾರದು. ಆರೋಗ್ಯವನ್ನು ಸರಿಯಾಗಿ ನೋಡಿಕೊಳ್ಳಬೇಕು~ ಎಂದು ಸಲಹೆ ನೀಡಿದರು.

`ಮಳೆ ಬಂದರೆ ಈ ಸ್ಥಳದಿಂದ ಹೋಗೋದಕ್ಕೆ ಆಗಲ್ಲ ಎಂದು ಪ್ರೆಸ್‌ಕ್ಲಬ್ ಸಿಬ್ಬಂದಿ ಹೇಳುತ್ತಿದ್ದರು. ಅವತ್ತು ನೋಡಿ ಏನಾದರೂ ವ್ಯವಸ್ಥೆ ಮಾಡುತ್ತೇನೆ ಎಂದು ಹೇಳಿದಾಗ, ಎಲ್ಲರೂ ಹೇಳಿ ಹೋದರು ಇವರೂ ಸಹ ಹಾಗೇ ಆಶ್ವಾಸನೆ ನೀಡಿ ಮರೆಯುತ್ತಾರೆ ಎಂದು ಸ್ವಲ್ಪ ಜನ ಮಾತನಾಡಿಕೊಂಡಿದ್ದರು.

ಅವರ ಮಾತಿಗೆ ಇಂದು ಉತ್ತರ ಸಿಕ್ಕಿರಬೇಕು~ ಎಂದರು. `ಪ್ರೆಸ್‌ಕ್ಲಬ್ ಅಧ್ಯಕ್ಷ ಎಂ.ಎ.ಪೊನ್ನಪ್ಪ, ಅರಣ್ಯ ಸಚಿವ ಸಿ.ಪಿ.ಯೋಗೇಶ್ವರ್, ಮೇಯರ್ ಶಾರದಮ್ಮ, ಪ್ರಧಾನ ಕಾರ್ಯದರ್ಶಿ ಕೆ.ಸದಾಶಿವ ಶೆಣೈ, ಉಪ ಮೇಯರ್ ಎಸ್.ಹರೀಶ್ ಉಪಸ್ಥಿತರಿದ್ದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.