ADVERTISEMENT

ಬಡ್ತಿ ಆದೇಶ ರದ್ದು: ಕ್ರಮಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 9 ಜೂನ್ 2012, 19:30 IST
Last Updated 9 ಜೂನ್ 2012, 19:30 IST

ಬೆಂಗಳೂರು: `ಯುಜಿಸಿ ನಿಯಮಾನುಸಾರ ಪಿಎಚ್.ಡಿ ಅಧ್ಯಾಪಕರುಗಳಿಗೆ  ನೀಡಿದ್ದ ವೇತನ ಬಡ್ತಿಯನ್ನು (ಆದೇಶವನ್ನು ತಿರಸ್ಕರಿಸಿ) ರದ್ದು ಪಡಿಸಿರುವ ನಗರದ ಸರ್ಕಾರಿ ವಿಜ್ಞಾನ ಕಾಲೇಜು ಮತ್ತು ಮಹಾರಾಣಿ ಕಾಲೇಜು ವಿಜ್ಞಾನ ಕಾಲೇಜಿನ ಪ್ರಾಂಶುಪಾಲರ ವಿರುದ್ದ  ಸೂಕ್ತ ಕ್ರಮಕೈಗೊಳ್ಳಬೇಕು~ ಎಂದು ಎಂದು ಕರ್ನಾಟಕ ರಾಜ್ಯ ಸರ್ಕಾರಿ ಕಾಲೇಜಿನ ಪಿಎಚ್.ಡಿ ಉಪನ್ಯಾಸಕರ ಸಂಘದ ರಾಜ್ಯ ಅಧ್ಯಕ್ಷ ಡಾ.ಎಚ್.ಪ್ರಕಾಶ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, `ಯುಜಿಸಿ ನಿಯಮಗಳು ಮತ್ತು ಕರ್ನಾಟಕ ರಾಜ್ಯ ಸರ್ಕಾರಿ ಅದೇಶದ ಪ್ರಕಾರ ಸೇವಾ ಪೂರ್ವದಲ್ಲಿ ಪಿಎಚ್.ಡಿ ಹೊಂದಿದವರಿಗೆ ನಾಲ್ಕು ಮುಂಗಡ ವೇತನ ಭಡ್ತಿಗಳನ್ನು ನೀಡಬೇಕು ಎಂದು ಇದೆ. ಆದರೇ ನಗರ ಸರ್ಕಾರಿ ವಿಜ್ಞಾನ ಮಹಾವಿದ್ಯಾಲಯ ಮತ್ತು ಮಹಾರಾಣಿ ವಿಜ್ಞಾನ ಕಾಲೇಜಿನ ಪ್ರಾಂಶುಪಾಲರು ಸರ್ಕಾರಿ ಆದೇಶವನ್ನು ಉಲ್ಲಂಘಿಸಿ ಮುಂಗಡ ವೇತನವನ್ನು ರದ್ದು ಪಡಿಸಿ ಆದೇಶವನ್ನು ಹೊರಡಿಸಿದ್ದು, ಆದರೇ ಈ ಆದೇಶಕ್ಕೆ ಕೆಎಟಿ ತಡೆ ನೀಡಿದೆ~ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.