ADVERTISEMENT

ಬಳಕೆದಾರರ ಅಭಿವೃದ್ಧಿ ಶುಲ್ಕ ಪರಿಷ್ಕರಿಸಲು ಎಇಆರ್‍ಎ ನಿರ್ದೇಶನ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2013, 19:59 IST
Last Updated 25 ಸೆಪ್ಟೆಂಬರ್ 2013, 19:59 IST

ಬೆಂಗಳೂರು: ಬೆಂಗಳೂರು ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದ (ಬಿಐಎಎಲ್‌) ಬಳಕೆದಾರರ ಅಭಿವೃದ್ಧಿ ಶುಲ್ಕವನ್ನು (ಯುಡಿಎಫ್) ಪರಿಷ್ಕರಿಸಲು ವಿಮಾನ ನಿಲ್ದಾಣ ಆರ್ಥಿಕ ನಿಯಂತ್ರಣ ಪ್ರಾಧಿಕಾರ (ಎಇಆರ್‍ಎ) ಬುಧವಾರ ನಿರ್ದೇಶನ ನೀಡಿದೆ.

ದೇಶೀಯ ಪ್ರಯಾಣಿಕರಿಗೆ ಶೇ 240 ಹಾಗೂ ವಿದೇಶಿ ಪ್ರಯಾಣಿ ಕರಿಗೆ ಶೇ 70ರಷ್ಟು ಬಳಕೆದಾರ ಅಭಿ ವೃದ್ಧಿ ಶುಲ್ಕ ಹೆಚ್ಚಳಕ್ಕೆ ಬಿಐಎಲ್ಎಲ್‌ ಈ ಹಿಂದೆ ಎಇಆರ್‌ಎಗೆ ಪ್ರಸ್ತಾವ ಸಲ್ಲಿಸಿತ್ತು. ಆದರೆ, ಈ ಶುಲ್ಕ ಹೆಚ್ಚಳಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಎಇಆರ್‌ಎ ಹೊಸದಾಗಿ ಶುಲ್ಕ ಪ್ರಸ್ತಾವ ಸಲ್ಲಿಸು ವಂತೆ ಬಿಐಎಲ್ಎಲ್‌ಗೆ ಸೂಚಿಸಿದೆ. ಹೀಗಾಗಿ ಅ.1ರಿಂದ ನೂತನ ಶುಲ್ಕ ಜಾರಿಗೆ ಬರುವುದು ಅನುಮಾನವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.