ADVERTISEMENT

‘ಭಾಷೆಯ ಬಗ್ಗೆ ಸಂಕುಚಿತತೆ ತೊರೆಯಬೇಕು’

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2018, 20:33 IST
Last Updated 28 ಫೆಬ್ರುವರಿ 2018, 20:33 IST
ಮಲ್ಲೇಪುರ ಜಿ.ವೆಂಕಟೇಶ್‌, ವೂಡೇ ಪಿ ಕೃಷ್ಣ, ಶೇಷಾದ್ರಿಪುರ ಶಿಕ್ಷಣದತ್ತಿಯ ಅಧ್ಯಕ್ಷ ಎನ್.ಆರ್.ಪಂಡಿತಾರಾಧ್ಯ ಮಾತುಕತೆ ನಡೆಸಿದರು
ಮಲ್ಲೇಪುರ ಜಿ.ವೆಂಕಟೇಶ್‌, ವೂಡೇ ಪಿ ಕೃಷ್ಣ, ಶೇಷಾದ್ರಿಪುರ ಶಿಕ್ಷಣದತ್ತಿಯ ಅಧ್ಯಕ್ಷ ಎನ್.ಆರ್.ಪಂಡಿತಾರಾಧ್ಯ ಮಾತುಕತೆ ನಡೆಸಿದರು   

ಬೆಂಗಳೂರು: ಭಾಷೆಯ ಬಗ್ಗೆ ಸಂಕುಚಿತ ಭಾವನೆ ತೊರೆದು ವಿಶಾಲಮನೋಭಾವ ಬೆಳೆಸಿಕೊಳ್ಳಬೇಕು ಎಂದು ಶೇಷಾದ್ರಿಪುರ ಶಿಕ್ಷಣದತ್ತಿಯ ಪ್ರಧಾನ ಕಾರ್ಯದರ್ಶಿ ವೂಡೇ ಪಿ.ಕೃಷ್ಣ ಅಭಿಪ್ರಾಯಪಟ್ಟರು.

ಯಲಹಂಕದ ಶೇಷಾದ್ರಿಪುರ ಪ್ರಥಮದರ್ಜೆ ಕಾಲೇಜಿನಲ್ಲಿ ಭಾಷಾಸಂಗಮ ವೇದಿಕೆ ಆಶ್ರಯದಲ್ಲಿ ಆಯೋಜಿಸಿದ್ದ ‘ಭಾಷಾ ಸಾಮರಸ್ಯ’ ಕುರಿತ ವಿಶೇಷಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು

ವಿವಿಎಸ್ ಪದವಿಕಾಲೇಜಿನ ಪ್ರಾಂಶುಪಾಲ ಡಾ.ಎಂ.ಸಿ.ಪ್ರಕಾಶ್, ‘ಸಾಹಿತಿಗಳಾದ ಮಾಸ್ತಿ, ಕುವೆಂಪು, ಡಿವಿಜಿ, ಅಡಿಗರು ಇಂಗ್ಲಿಷ್‌ ಭಾಷೆಯಿಂದ ಪುಷ್ಠಿ ಪಡೆದರೂ, ತಮ್ಮ ಭಾವನೆಗಳನ್ನು ಮಾತೃಭಾಷೆಯಲ್ಲಿಯೇ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳು ಈ ದಿಸೆಯಲ್ಲಿ ಚಿಂತನೆ ನಡೆಸಬೇಕು’ ಎಂದು ಸಲಹೆ ನೀಡಿದರು.

ADVERTISEMENT

ವಿದ್ವಾಂಸ ಡಾ.ಮಲ್ಲೇಪುರ ಜಿ. ವೆಂಕಟೇಶ್‌, ‘ವಿದ್ಯಾರ್ಥಿಗಳು ಭಾಷೆಯನ್ನು ಬಳಸುವಾಗ ಬಹಳ ಎಚ್ಚರಿಕೆಯಿಂದ ಯೋಚಿಸಿ, ಮಾತನಾಡಬೇಕು. ಅದೊಂದು ವ್ಯಕ್ತಿತ್ವದ ಭಾಗವಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.