ADVERTISEMENT

ಭಾಸ್ಕರ್: ಸ್ವತಂತ್ರ ಅಭ್ಯರ್ಥಿ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2018, 19:32 IST
Last Updated 13 ಏಪ್ರಿಲ್ 2018, 19:32 IST

ಬೆಂಗಳೂರು: ‘ಚಿಂತಾಮಣಿಯಲ್ಲಿ ಪ್ರಭಾವಿಗಳ ರಾಜಕಾರಣದಿಂದ ಬೇಸರಗೊಂಡು ಈ ಬಾರಿ ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದೇನೆ’ ಎಂದು ಭಾಸ್ಕರ್‌ ಎ. ಶಿವಾರೆಡ್ಡಿ ತಿಳಿಸಿದರು.

ಶುಕ್ರವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ‘ಚಿಂತಾಮಣಿ ಕ್ಷೇತ್ರದಲ್ಲಿ 60 ವರ್ಷಗಳಿಂದ ಆಂಜನೇಯ ರೆಡ್ಡಿ ಮತ್ತು ಗಂಗೀರೆಡ್ಡಿ ಕುಟುಂಬದವರೇ ಜನಪ್ರತಿನಿಧಿಗಳಾಗಿದ್ದಾರೆ. ಕ್ಷೇತ್ರಾಭಿವೃದ್ಧಿ ಮಾಡದೆ ತಮ್ಮ ಐಶ್ವರ್ಯಾಭಿವೃದ್ಧಿ ಮಾಡಿಕೊಂಡಿದ್ದಾರೆ. ಜಾತಿ ರಾಜಕೀಯ ಮಾಡುತ್ತಿರುವ ಅವರು ದಲಿತರನ್ನು ಕಡೆಗಣಿಸಿದ್ದಾರೆ’ ಎಂದು ಆರೋಪಿಸಿದರು.

‘ಚುನಾವಣೆಯಲ್ಲಿ ನಾನು ಗೆದ್ದರೆ ಶಿಕ್ಷಣ, ವ್ಯವಸಾಯ, ಆರ್ಥಿಕತೆ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿಯೂ ಅಭಿವೃದ್ಧಿ ಮಾಡುತ್ತೇನೆ. ರೈತರಿಗೆ ಬೇಕಾದ ಶಾಶ್ವತ ನೀರಾವರಿಯನ್ನು ಒಂದೇ ವರ್ಷದಲ್ಲಿ ಒದಗಿಸಿಕೊಡುತ್ತೇನೆ’ ಎಂದಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.