ಬೆಂಗಳೂರು: ಮಹಿಳೆಯರ ಸ್ವರಕ್ಷಣೆಯ ಸಾಧನವಾಗಿ ‘ಸೇವ್ ಮೈ ಸಿಸ್ಟರ್ ಟ್ರಸ್ಟ್’ ಹೊಸ ಮಾದರಿಯ ಉಂಗುರವನ್ನು ಬಿಡುಗಡೆ ಶನಿವಾರ ಮಾಡಿದೆ.
ಈ ಉಂಗುರದಲ್ಲಿ ಕಿರಿದಾದ ಟ್ಯಾಂಕ್ ಇದ್ದು ಅದರಲ್ಲಿ ಸೂಜಿ ಹಾಗೂ ರಸಾಯಾನಿಕ ಅಂಶವಿರುತ್ತದೆ.
ಅಪಾಯದ ಮುನ್ಸೂಚನೆಯ ಕಂಡುಬಂದಾಗ ಮಹಿಳೆಯರು ಉಂಗುರದ ತಿರುಗಣಿಯನ್ನು ತಿರುಗಿಸಿದರೆ, ಈ ರಸಾಯಾನಿಕ ಅಂಶ ಎದುರಿಗಿರುವ ಮನುಷ್ಯನ ದೇಹದೊಳಗೆ ತೂರುತ್ತದೆ ಎಂದು ಟ್ರಸ್ಟ್ ಅಧ್ಯಕ್ಷ ಇಮ್ರಾನ್ ಖಾನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನಂತರ ಮಾತನಾಡಿದ ಶಾಸಕಿ ತಾರಾ ಅನೂರಾಧ, ‘ಹೊಸ ವಿನ್ಯಾಸದಲ್ಲಿ ಈ ರೀತಿಯ ಉಂಗುರಗಳು ಮಾರುಕಟ್ಟೆಗೆ ಬರಲಿ. ಆದರೆ ದುರ್ಬಳಕೆ ಬೇಡ’ ಎಂದು ಸಲಹೆ ನೀಡಿದರು. ಸಮಾಜವಾದಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಶಂಕರ್ ಬಿದರಿ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.