ADVERTISEMENT

ಮೆಟ್ರೊ: ಜಪಾನ್ ಹೆಚ್ಚುವರಿ ಸಾಲ ಮಂಜೂರು

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2011, 20:20 IST
Last Updated 26 ಫೆಬ್ರುವರಿ 2011, 20:20 IST

ಬೆಂಗಳೂರು: ‘ನಮ್ಮ ಮೆಟ್ರೊ’ದ ಮೊದಲ ಹಂತದ ಯೋಜನೆಗಾಗಿ ಜಪಾನ್ ಅಂತರರಾಷ್ಟ್ರೀಯ ಸಹಕಾರ ಏಜೆನ್ಸಿಯು (ಜೆಐಸಿಎ) 19 ಶತಕೋಟಿ ಯೆನ್ (ರೂ 1054 ಕೋಟಿ) ಹೆಚ್ಚುವರಿ ಸಾಲವನ್ನು ಮಂಜೂರು ಮಾಡಿದೆ.

ವಾರ್ಷಿಕ ಶೇಕಡಾ 1.4ರ ಬಡ್ಡಿ ದರದಲ್ಲಿ 30 ವರ್ಷಗಳ ಅವಧಿಗೆ ನೀಡಿರುವ ದೀರ್ಘಾವಧಿ ಸಾಲ ಇದಾಗಿದೆ ಎಂದು ‘ಬೆಂಗಳೂರು ಮೆಟ್ರೊ ರೈಲು ನಿಗಮ’ದ ವಕ್ತಾರ ಬಿ.ಎಲ್.ಯಶವಂತ್ ಚವಾಣ್ ಹೇಳಿದ್ದಾರೆ.

ಯೋಜನೆಗೆ ಸಾಲ ಸೌಲಭ್ಯ ಒದಗಿಸುತ್ತಿರುವ ಈ ಏಜೆನ್ಸಿಯು ‘ನಮ್ಮ ಮೆಟ್ರೊ’ಗೆ ಈ ಮೊದಲೇ 44.7 ಶತಕೋಟಿ ಯೆನ್ ಸಾಲವನ್ನು  (ರೂ 2200 ಕೋಟಿ) ಮಂಜೂರು ಮಾಡಿತ್ತು ಎಂದು ಅವರು ನೀಡಿರುವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.