ADVERTISEMENT

ಯಡಿಯೂರಪ್ಪಗೆ ಮತ್ತೊಂದು ನೋಟಿಸ್‌ ನೀಡಲು ಮನವಿ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2017, 19:35 IST
Last Updated 4 ಅಕ್ಟೋಬರ್ 2017, 19:35 IST
ಯಡಿಯೂರಪ್ಪಗೆ ಮತ್ತೊಂದು ನೋಟಿಸ್‌ ನೀಡಲು ಮನವಿ
ಯಡಿಯೂರಪ್ಪಗೆ ಮತ್ತೊಂದು ನೋಟಿಸ್‌ ನೀಡಲು ಮನವಿ   

ಬೆಂಗಳೂರು: ‘ಬಿಜೆಪಿ ಕಾರ್ಯಕರ್ತ ವಿನಯ್‌ ಅಪಹರಣ ಯತ್ನ ಹಾಗೂ ಹಲ್ಲೆ ಪ್ರಕರಣದ ವಿಚಾರಣೆಗೆ ಹಾಜರಾಗದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಮತ್ತೊಂದು ನೋಟಿಸ್‌ ನೀಡಬೇಕು’ ಎಂದು ವಕೀಲ ಎ.ಪಿ.ಅಮೃತೇಶ್‌ ಅವರು ನಗರ ಪೊಲೀಸ್‌ ಕಮಿಷನರ್‌ ಟಿ.ಸುನೀಲ್‌ಕುಮಾರ್ ಅವರಿಗೆ ಬುಧವಾರ ಮನವಿ ಸಲ್ಲಿಸಿದರು.

‘ಮಲ್ಲೇಶ್ವರ ಉಪವಿಭಾಗದ ಎಸಿಪಿ ಅವರು ಇತ್ತೀಚೆಗೆ ಯಡಿಯೂರಪ್ಪ ಅವರಿಗೆ ನೋಟಿಸ್‌ ನೀಡಿದ್ದರು. ಅದಕ್ಕೆ ಉತ್ತರಿಸಿರುವ ಯಡಿಯೂರಪ್ಪ, ‘ನನಗೆ 65 ವರ್ಷವಾಗಿದೆ. ವಿಚಾರಣೆಗೆ ಬರಲು ಆಗುವುದಿಲ್ಲ. ಮನೆಗೆ ಬಂದು ಹೇಳಿಕೆ ಪಡೆಯಿರಿ’ ಎಂದು ಹೇಳಿರುವುದು ಸರಿಯಲ್ಲ. 60 ವರ್ಷವಾದ ನಂತರವೇ ಅವರು ಮುಖ್ಯಮಂತ್ರಿ ಆಗಿದ್ದರು. ಹೊಸ ಪಕ್ಷವನ್ನೂ ಕಟ್ಟಿದ್ದರು. ರಾಜ್ಯದಲ್ಲೆಲ್ಲ ಪ್ರವಾಸ ಮಾಡಲು ಅಡ್ಡಿಯಾಗದ ವಯಸ್ಸು, ವಿಚಾರಣೆ ಹಾಜರಾಗಲು ಹೇಗೆ ಅಡ್ಡಿಯಾಗುತ್ತದೆ’ ಎಂದು ಅವರು ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT