ADVERTISEMENT

ಯುವ ಸಂಸತ್‌ ಸ್ಪರ್ಧೆ: ಶರತ್‌ಗೆ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 8 ಜನವರಿ 2014, 20:24 IST
Last Updated 8 ಜನವರಿ 2014, 20:24 IST

ನೆಲಮಂಗಲ: ‘ಪದವಿ ಪೂರ್ವ ತರಗತಿಗಳಿಗೂ ಬಿಸಿಯೂಟ ವಿಸ್ತರಿಸ­ಬೇಕು. ವಿದ್ಯಾರ್ಥಿ ವೇತನ ಪಾವತಿ­ಯನ್ನು ಸರಳಗೊಳಿಸಬೇಕು. ಶಿಕ್ಷಣ ಹಕ್ಕನ್ನು ಕಡ್ಡಾಯವಾಗಿ ಅನುಷ್ಠಾನ­ಗೊಳಿಸಬೇಕು’ ಎಂದು ಯುವ ಸಂಸತ್‌ನ ವಿರೋಧ ಪಕ್ಷ ನಾಯಕಿ ಗಿರಿಜಾ ಒತ್ತಾಯಿಸಿದರು.

ಸ್ಥಳೀಯ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಬುಧವಾರ ಜಿಲ್ಲಾ ಮಟ್ಟದ ಪದವಿಪೂರ್ವ ಶಿಕ್ಷಣ ಇಲಾಖೆಯು ಆಯೋಜಿಸಿದ್ದ ಯುವ­ಸಂಸತ್‌ (ಅಣಕು ಪ್ರದರ್ಶನ) ನಲ್ಲಿ ಮಾತನಾಡಿದರು.

ಸಭಾಧ್ಯಕ್ಷೆ ಸ್ಥಾನದಲ್ಲಿದ್ದ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಎಚ್‌.ಎಸ್‌.ಬಿಂದು ಅವರು ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಿದರು. ಮುಖ್ಯಮಂತ್ರಿಯಾಗಿದ್ದ ದೊಡ್ಡಬಳ್ಳಾಪುರ ಕಾಲೇಜಿನ ಶರತ್‌ಕುಮಾರ್‌ ಅವರು  ನೆಲ್ಸನ್‌ ಮಂಡೆಲಾ, ಜಿ.ಎಸ್‌.ಶಿವರುದ್ರಪ್ಪ, ಶ್ರೀಕಂಠದತ್ತ ಒಡೆಯರ್‌  ಅವರ ಸಾಧನೆಗಳನ್ನು ಸ್ಮರಿಸಿದರು.

  ಜಿಲ್ಲೆಯ 40 ಕಾಲೇಜಿನ 80 ವಿದ್ಯಾರ್ಥಿಗಳು ಸ್ಪರ್ಧಿಗಳಾಗಿ ಭಾಗಿಗ­ಳಾಗಿದ್ದರು. ಸಂಸದೀಯ ವ್ಯವಹಾರಗಳ ಸಚಿವಾಲಯದ ಉಪ ಕಾರ್ಯದರ್ಶಿ ಬಿ.ಜಿ.ಶ್ಯಾಮಲಾ ಕಲಾಪದ ವಿವರ ನೀಡಿದರು. ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಎನ್‌.ಸಾವಿತ್ರಿ ಉದ್ಘಾ­ಟಿ­ಸಿದರು. ಹಾಲು ಒಕ್ಕೂಟದ ನಿರ್ದೇ­ಶಕ ಎಂ.ಜಿ.ತಿಮ್ಮರಾಜು, ಗೋಪಾ­ಲ­ಪುರ ಗ್ರಾ.ಪಂ. ಅಧ್ಯಕ್ಷ ವಿ.ರಾಮ­ಸ್ವಾಮಿ, ರೋಟರಿ ನಾರಾಯಣ­ಮೂರ್ತಿ ವೇದಿಕೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.