ADVERTISEMENT

ರೇಷ್ಮೆ ಬೆಳೆಗಾರರ ಸಭೆ ಇಂದು

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2012, 4:35 IST
Last Updated 6 ಫೆಬ್ರುವರಿ 2012, 4:35 IST

ದೇವನಹಳ್ಳಿ: ಕೇಂದ್ರ ಸರ್ಕಾರದ ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ರೇಷ್ಮೆ ಆಮದು ಸುಂಕವನ್ನು ಶೇ 31 ಕ್ಕೆ ಏರಿಕೆ ಮಾಡುವಂತೆ ಒತ್ತಾಯಿಸಲು ಮತ್ತು  ರಾಜ್ಯ  ಮತ್ತು ಕೇಂದ್ರ ಸರ್ಕಾರ ರೇಷ್ಮೆ ಬೆಳೆಗಾರರ ಬಗ್ಗೆ ತಳೆದಿರುವ ಧೋರಣೆ ಕುರಿತು ಚರ್ಚಿಸಲು ವಿಜಯಪುರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೋಮವಾರ ರೇಷ್ಮೆ ಬೆಳೆಗಾರರ ಸಭೆ ಕರೆಯಲಾಗಿದೆ ಎಂದು ರೇಷ್ಮೆ ಹಿತರಕ್ಷಣಾ ವೇದಿಕೆ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಹರಳೂರು ನಾಗೇನಹಳ್ಳಿ ಕಲ್ಯಾಣ ಕುಮಾರ್ ತಿಳಿಸಿದ್ದಾರೆ.

ರೇಷ್ಮೆ ಗೂಡಿನ ಬೆಲೆ ಇಳಿಕೆ ಹಾಗೂ ಬೆಂಬಲ ಬೆಲೆ ವಿಷಯದಲ್ಲಿ ಸರ್ಕಾರಗಳು ನಿರ್ಲಕ್ಷ್ಯ ವಹಿಸುತ್ತಿವೆ.  ಈ ಬಗ್ಗೆ ಗಮನ ಸೆಳೆಯಲು ರೇಷ್ಮೆ ಬೆಳೆಗಾರು, ಒಂದು ಲಕ್ಷ ಪತ್ರಗಳನ್ನು ಪ್ರಧಾನ ಮಂತ್ರಿ ಕಾರ್ಯಲಯಕ್ಕೆ ತಲುಪಿಸುವ  ಚಳವಳಿ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.