ADVERTISEMENT

`ವಚನ ಬೋಧೆ' ಸೇರಿ 4 ಪುಸ್ತಕಗಳ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2013, 19:13 IST
Last Updated 1 ಏಪ್ರಿಲ್ 2013, 19:13 IST

ಬೆಂಗಳೂರು: `ಜಟಿಲ ವಿಷಯವನ್ನು ಸರಳವಾಗಿ ಜನಸಾಮಾನ್ಯರಿಗೆ ತಿಳಿ ಹೇಳಬೇಕಾದ ಗುರುಗಳು, ಇಂದು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಸರಳ ವಿಷಯವನ್ನು ಯಾರಿಗೂ ಅರ್ಥವಾಗದಂತೆ ಹೇಳಿ ಜನರಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ' ಎಂದು ಬೇಲಿಮಠದ ಶಿವರುದ್ರ ಸ್ವಾಮೀಜಿ ಕಳವಳ ವ್ಯಕ್ತಪಡಿಸಿದರು.

ಬಸವ ಯೋಗ ಟ್ರಸ್ಟ್ ಭಾನುವಾರ ನಗರದ ನಯನ ಸಭಾಂಗಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ `ಉಪಾಸನೆ', `ಎನ್‌ರಿಚಿಂಗ್ ಲೈಫ್', `ಪ್ರಾರ್ಥನೆ', `ವಚನ ಬೋಧೆ' ಪುಸ್ತಕಗಳನ್ನು ಬಿಡುಗಡೆ ಮಾಡಿ ಮಾತನಾಡಿದರು.

`ಜನಸಾಮಾನ್ಯರ ನುಡಿಗಳನ್ನು ದೇವಭಾಷೆಗೆ ಸರಳವಾಗಿ ಪರಿವರ್ತನೆ ಮಾಡಿದ ಕೀರ್ತಿ ಬಸವಣ್ಣ ಅವರಿಗೆ ಸ್ಲ್ಲಲುತ್ತದೆ. ಅವರು ಅರಿವು, ಆಚಾರ್ಯ ಮತ್ತು ಅನುಭವದ ನೆಲೆಯಲ್ಲಿ ಉಪಾಸನೆ ಮಾಡಿ ಜಗತ್ತಿಗೆ ಗುರುವಾಗಿ ಬೆಳೆದರು ಎಂದರು.

ಬಸವ ಯೋಗ ಟ್ರಸ್ಟ್‌ನ ಅಲ್ಲಮಪ್ರಭು ಸ್ವಾಮೀಜಿ ಮಾತನಾಡಿ, `ಬಸವಣ್ಣನ ಸಮುದಾಯಕ್ಕೆ ಸೀಮಿತವಾಗಿಲ್ಲ. ಅವರು ಜನಸಾಮಾನ್ಯರ ಮೇಲೆ ಪ್ರಯೋಗಗಳನ್ನು ಮಾಡಿ, ಜ್ಞಾನ, ಕ್ರಿಯೆ ಮತ್ತು ಭಕ್ತಿಯ ಸಮ್ಮಿಲನದಿಂದ ಭಗವಂತನ ಸಾಕ್ಷಾತ್ಕಾರ ಸಾಧ್ಯ ಎಂದು ವಿಶ್ವಕ್ಕೆ ಸಾರಿದರು' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.