ADVERTISEMENT

ವಿಜ್ಞಾನನಗರ: ಸಮಸ್ಯೆಗಳ ಆಗರ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2013, 20:00 IST
Last Updated 18 ಡಿಸೆಂಬರ್ 2013, 20:00 IST
ಕೃಷ್ಣರಾಜಪುರ ಸಮೀಪದ ವಿಜ್ಞಾನನಗರ ವಾರ್ಡ್‌ಗೆ ಭೇಟಿ ನೀಡಿದ ಮೇಯರ್‌ ಬಿ.ಎಸ್‌. ಸತ್ಯನಾರಾಯಣ ಬಸವನಗರ ಬಸ್‌ ನಿಲ್ದಾಣದ ಎದುರು ಮಳೆ ನೀರು ಕಾಲುವೆ ಅವ್ಯವಸ್ಥೆಯನ್ನು ಪರಿಶೀಲಿಸಿದರು.
ಕೃಷ್ಣರಾಜಪುರ ಸಮೀಪದ ವಿಜ್ಞಾನನಗರ ವಾರ್ಡ್‌ಗೆ ಭೇಟಿ ನೀಡಿದ ಮೇಯರ್‌ ಬಿ.ಎಸ್‌. ಸತ್ಯನಾರಾಯಣ ಬಸವನಗರ ಬಸ್‌ ನಿಲ್ದಾಣದ ಎದುರು ಮಳೆ ನೀರು ಕಾಲುವೆ ಅವ್ಯವಸ್ಥೆಯನ್ನು ಪರಿಶೀಲಿಸಿದರು.   

ಕೃಷ್ಣರಾಜಪುರ: ವಿಜ್ಞಾನನಗರ ವಾರ್ಡ್‌ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಲೇ ಇಲ್ಲ ಎಂದು ವಿವಿಧ ಬಡಾವಣೆ ನಿವಾಸಿಗಳು ಮೇಯರ್‌ ಬಿ.ಎಸ್‌.ಸತ್ಯನಾರಾಯಣ ಅವರಲ್ಲಿ ಅಳಲು ತೋಡಿಕೊಂಡರು.

ಮೇಯರ್‌ ಬುಧವಾರ ವಾರ್ಡ್‌ನಲ್ಲಿ ಭೇಟಿ ನೀಡಿ, ಕಾಮಗಾರಿಗಳ ಪರಿಶೀಲನೆ ನಡೆಸಿದಾಗ ಅವರ ಮುಂದೆ ಸಮಸ್ಯೆಗಳ ಪಟ್ಟಿ ಇಟ್ಟರು.

ಸಮರ್ಪಕ ರಸ್ತೆ ಇಲ್ಲ. ಕುಡಿಯುವ ನೀರಿನ ಸೌಲಭ್ಯವಿಲ್ಲ. ಕೊಳವೆ ಬಾವಿ ಇಲ್ಲ. ಕುಡಿಯುವ ನೀರಿಗಾಗಿ ಒಂದು ಕಿ.ಮೀ. ದೂರದವರೆಗೆ ಹೋಗ ಬೇಕಿದೆ ಎಂದು ದೂರಿದರು.

ಸಮಸ್ಯೆಗಳನ್ನು ಬಗೆಹರಿಸುವಂತೆ ಮೇಯರ್‌ ಬಿಬಿಎಂಪಿ, ಜಲ ಮಂಡಳಿ, ಬೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು.
ಮೇಯರ್‌ ಅನುದಾನದಡಿ ವಾರ್ಡ್‌ ವ್ಯಾಪ್ತಿಯ ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳ ಲಾಗುವುದು.

ಜಲ ಮಂಡಳಿ ಅಧಿಕಾರಿಗಳು ಕುಡಿಯುವ ನೀರು ಪೂರೈಕೆಗೆ ಕೊಳವೆ ಅಳವಡಿಸು ತ್ತಿದ್ದು ಅದು ಪೂರ್ಣಗೊಂಡ ನಂತರ ಕಾಂಕ್ರೀಟ್‌ ರಸ್ತೆ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.

ಕೆರೆಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಇದೇ 21 ರಂದು ಸಭೆ ಕರೆಯಲಾಗಿದೆ. ಸುಪ್ರೀಂ ಕೋರ್ಟ್‌ ಆದೇಶದನ್ವಯ ಒತ್ತುವರಿ ತೆರವು ಗೊಳಿಸಲಾಗು ವುದು. ಬಡವರು ಮನೆ ಕಟ್ಟಿಕೊಂಡಿದ್ದರೆ ಅವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದು ಅವರು ತಿಳಿಸಿದರು.

ಇದೇ ಸಂದರ್ಭದಲ್ಲಿ ವಿಜ್ಞಾನನಗರ ವಾರ್ಡ್‌ ಅಭಿ ವೃದ್ಧಿ ಕೆಲಸಗಳ ಅಂದಾಜು ಪಟ್ಟಿಯನ್ನು ತಯಾರಿಸಿ  ಕಳುಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಉಪ ಮೇಯರ್‌ ಇಂದಿರಾ, ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಸಹಾಯಕ ನಿರ್ದೇಶಕ ಶಶಿಧರ, ಬಿಬಿಎಂಪಿ ಮುಖ್ಯ ಎಂಜಿನಿಯರ್‌ ಎಂ.ಎಲ್‌. ಮುನಿಕೃಷ್ಣ, ಜಲಮಂಡಳಿ ಎಂಜಿನಿಯರ್‌ ಮಹದೇವ ಗೌಡ , ವೆಂಕಟೇಶ್‌, ಬಿಬಿಎಂಪಿ ಸದಸ್ಯ ಸಿದ್ಧಲಿಂಗಯ್ಯ, ಎನ್‌.ವೀರಣ್ಣ ಮತ್ತಿತರು ಅಧಿಕಾರಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.