ADVERTISEMENT

ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2015, 20:20 IST
Last Updated 20 ಫೆಬ್ರುವರಿ 2015, 20:20 IST

ಬೆಂಗಳೂರು: ಎಂ.ಕೆ.ಜಯಮ್ಮ ಮತ್ತು ಬಿ. ಎಸ್. ಆರ್‌. ಶಾಸ್ತ್ರಿ ಟ್ರಸ್ಟ್‌ ವತಿ­ಯಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ಶೇ 80ಕ್ಕಿಂತ ಹೆಚ್ಚು ಅಂಕ ಪಡೆದಿರುವ ಪಿಯುಸಿ, ಡಿಪ್ಲೊಮಾ, ಆಯುರ್ವೇದ, ತಾಂತ್ರಿಕ, ವೈದ್ಯ­ಕೀಯ, ಕಾನೂನು, ದಂತ ವಿಜ್ಞಾನ, ಪಶು­­ವೈದ್ಯಕೀಯ  ವಿಷಯಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ­ಗಳು  ಆನ್‌ಲೈನ್‌ ಮೂಲಕ ಫೆ. 28ರ ಒಳಗೆ ಅರ್ಜಿ ಸಲ್ಲಿಸಬೇಕು.
ವಿದ್ಯಾರ್ಥಿ ವೇತನ ವಿತರಣೆ ಸಮಾರಂಭವು ಏಪ್ರಿಲ್‌ 12ರಂದು ಬೆಂಗಳೂರಿನ ‘ಯವನಿಕಾ’ ಸಭಾಂಗಣ­ದಲ್ಲಿ ನಡೆಯಲಿದೆ.

ಸುಪ್ರೀಂ ಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯ­ಮೂರ್ತಿ ಎಂ. ಎನ್‌.­ವೆಂಕಟಾ­ಚಲಯ್ಯ, ರಾಮಕೃಷ್ಣ ಮಠದ ವೀರೇಶಾನಂದ ಸ್ವಾಮೀಜಿ, ಕೇಂದ್ರ ಸಚಿವ ಅನಂತಕುಮಾರ್‌ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿ­ದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಸಂಪರ್ಕಕ್ಕೆ: 080– 2649 4207. ಇ–ಮೇಲ್‌: bsrsastry­trust­@gmail.com ವೆಬ್‌ಸೈಟ್‌: www.bsrsastry.org

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.