ರಾಮನಗರ: `ಕುಲಾಂತರಿ ಆಹಾರ ಅಂದರೆ ವಿಷಯುಕ್ತ ಆಹಾರ. ನಮಗದು ಬೇಕಾಗಿಲ್ಲ. ರೈತರ ಬೀಜ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳಲು ವಿದೇಶಿ ಕಂಪೆನಿಗಳು ಮಾಡುತ್ತಿರುವ ಕುತಂತ್ರವಿದು. ನಮ್ಮ ಹಕ್ಕನ್ನು ನಾವು ಹೋರಾಟದ ಮೂಲಕ ಉಳಿಸಿಕೊಳ್ಳಬೇಕು. ಇಲ್ಲದಿದ್ದರೆ ನಾಳೆ ಬಿತ್ತನೆ ಬೀಜಕ್ಕಾಗಿ ಕಂಪೆನಿಗಳ ಮುಂದೆ ಸಾಲು ನಿಲ್ಲಬೇಕಾದ ಪರಿಸ್ಥಿತಿ ಎದುರಾಗುತ್ತದೆ~ ಎಂದು ಕರ್ನಾಟಕ ಕುಲಾಂತರಿ ವಿರೋಧಿ ಆಂದೋಲನದ ಚೆನ್‌ರಾಜ್ ಎಚ್ಚರಿಸಿದರು.
ಕನಕಪುರ ತಾಲ್ಲೂಕಿನ ಮರಳವಾಡಿ ಹೋಬಳಿ ಗೋದೂರು ಗ್ರಾಮದಲ್ಲಿ ಗುರುವಾರ ನಡೆದ ಅಂದು ಉಪ್ಪು ಇಂದು ಬೀಜ ಜಾಥಾ ಉದ್ದೇಶಿಸಿ ಮಾತನಾಡಿದರು. ಹಾರೋಹಳ್ಳಿಯಿಂದ ವಾಹನದ ಮೂಲಕ ಮೆರವಣಿಗೆ ಹೊರಟ ಕಾರ್ಯಕರ್ತರು ಗೋದೂರು, ಕೊಳಾಳುಗುಂದಿ ಮತ್ತಿತರ ಗ್ರಾಮಗಳಲ್ಲಿ ಮೆರವಣಿಗೆ ನಡೆಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.