ADVERTISEMENT

ವೆಂಕಟಸ್ವಾಮಿಗೆ ಪೆರಿಯಾರ್ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2013, 19:59 IST
Last Updated 11 ಸೆಪ್ಟೆಂಬರ್ 2013, 19:59 IST
ವೆಂಕಟಸ್ವಾಮಿ
ವೆಂಕಟಸ್ವಾಮಿ   

ಬೆಂಗಳೂರು: ‘ವಿಚಾರ­ವಾದಿ­ಗಳ ವೇದಿಕೆ ಕರ್ನಾಟಕ (ವಿವೇಕ) ಸಂಘಟನೆಯ ವತಿ­ಯಿಂದ ನೀಡಲಾಗುವ ಪ್ರಸಕ್ತ ಸಾಲಿನ ‘ಪೆರಿಯಾರ್ ಪ್ರಶಸ್ತಿ’ಗೆ ಸಮತಾ ಸೈನಿಕ­ದಳದ ರಾಜ್ಯ ಘಟಕದ ಅಧ್ಯಕ್ಷ ಎಂ.­ವೆಂಕಟಸ್ವಾಮಿ ಅವರನ್ನು ಆಯ್ಕೆ ಮಾಡ­ಲಾಗಿದೆ’ ಎಂದು ಸಾಹಿತಿ ಚಂದ್ರಶೇಖರ ಪಾಟೀಲ ತಿಳಿಸಿದರು.

ಬುಧವಾರ ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪೆರಿಯಾರ್‌ ಅವರ 134ನೇ ಜಯಂತಿಯ ಅಂಗವಾಗಿ ಸೆಪ್ಟೆಂಬರ್‌ 17ರಂದು ನಗ­ರದ ಸೆಂಟ್ರಲ್‌ ಕಾಲೇಜಿನ  ಸೆನೆಟ್‌ ಸಭಾಂಗ­ಣದಲ್ಲಿ ನಡೆ­ಯುವ ಸಮಾ­ರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡ­ಲಾಗುವುದು.

ವೇದಿಕೆಯ ಅಧ್ಯಕ್ಷ ಎ.ಕೆ.ಸುಬ್ಬಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ತಿಳಿಸಿದರು.
ಸಮಾರಂಭದ ವೇದಿಕೆಗೆ ಇತ್ತೀಚೆಗೆ ಹತ್ಯೆಗೀಡಾದ ಪುಣೆಯ ವಿಚಾರವಾದಿ ನರೇಂದ್ರ ದಾಭೋಲಕರ್ ಅವರ ಹೆಸರಿಡಲಾಗುವುದು.

ನಿಡುಮಾಮಿಡಿ ಮಠದ ವೀರಭದ್ರ ಚನ್ನಮಲ್ಲ  ಸ್ವಾಮೀಜಿ ಅವರು ಸಾನ್ನಿಧ್ಯ ವಹಿಸಲಿದ್ದಾರೆ. ಲೇಖಕಿ ಬಿ.ಟಿ.ಲಲಿತಾನಾಯಕ್‌ ಆಶಯ ಭಾಷಣ ಮಾಡಲಿದ್ದು, ‘ಢುಂಢಿ’ ಕೃತಿಯ ಲೇಖಕ ಯೋಗೇಶ್ ಮಾಸ್ಟರ್‌ ಮುಖ್ಯಭಾಷಣ ಮಾಡಲಿದ್ದಾರೆ ಎಂದರು.

ಪ್ರಶಸ್ತಿಯು ₨25 ಸಾವಿರ ನಗದು ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ ಎಂದು ತಿಳಿಸಿದರು. ಟಿಪ್ಪುಸುಲ್ತಾನ್‌ ಸಂಯುಕ್ತ ರಂಗದ ರಾಜ್ಯ ಘಟಕದ ಅಧ್ಯಕ್ಷ ಸರ್ದಾರ್ ಅಹಮದ್‌ ಖುರೇಷಿ, ವೇದಿಕೆಯ ಸಂಚಾಲಕ ತಲಕಾಡು ಚಿಕ್ಕರಂಗೇಗೌಡ ಮತ್ತಿತರರು ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.