ADVERTISEMENT

ವೈಭವದ ಮುದ್ವೀರೇಶ್ವರ ಜಾತ್ರೆ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2018, 19:15 IST
Last Updated 3 ಡಿಸೆಂಬರ್ 2018, 19:15 IST
ಮುದ್ವೀರೇಶ್ವರ ಉತ್ಸವ ಮೂರ್ತಿಯ ಪಲ್ಲಕ್ಕಿ ಮೆರವಣಿಗೆಯ ನೋಟ
ಮುದ್ವೀರೇಶ್ವರ ಉತ್ಸವ ಮೂರ್ತಿಯ ಪಲ್ಲಕ್ಕಿ ಮೆರವಣಿಗೆಯ ನೋಟ   

ದಾಬಸ್‌ಪೇಟೆ: ಶಿವಗಂಗೆ ಬೆಟ್ಟದ ತಪ್ಪಲಿನ ದಕ್ಷಿಣ ಭಾಗಕ್ಕಿರುವ ಮುದ್ವೀರೇಶ್ವರ ಸ್ವಾಮಿ ಜಾತ್ರೆ ಸೋಮವಾರ ವೈಭವದಿಂದ ನಡೆಯಿತು.

ದೇವರ ಮೂರ್ತಿಗೆ ಬೆಳಿಗ್ಗೆ ರುದ್ರಾಭಿಷೇಕ, ಹೋಮ ಹವನಗಳೊಂದಿಗೆ ವಿಶೇಷ ಪೂಜೆ ನಡೆಯಿತು. ಹೂಗಳಿಂದ ಅಲಂಕೃತಗೊಂಡ ದೇವರ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಕೂರಿಸಿ ಮಂಗಳ ವಾದ್ಯ, ವೀರಗಾಸೆ ಹಾಗೂ ನಂದಿಧ್ವಜ ಕುಣಿತದೊಂದಿಗೆ ಪಲ್ಲಕ್ಕಿಯನ್ನು ಎಳೆಯಲಾಯಿತು.

ಸಾವಿರಾರು ಭಕ್ತರು ಪಾಲ್ಗೊಂಡಿದ್ದರು. ಭಕ್ತರಿಗೆ ಮುದ್ವೀರೇಶ್ವರ ಟ್ರಸ್ಟ್ ವತಿಯಿಂದ ಅನ್ನದಾಸೋಹ ಏರ್ಪಡಿಸಲಾಗಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.