ADVERTISEMENT

ಶುದ್ಧ ನೀರಿನ 50 ಘಟಕ ಆರಂಭಿಸಲು ಅನುದಾನ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2017, 19:30 IST
Last Updated 9 ಡಿಸೆಂಬರ್ 2017, 19:30 IST
ಶ್ರೀನಿವಾಸಪುರದಲ್ಲಿ ಶುದ್ಧ ನೀರಿನ ಘಟಕವನ್ನು ಶಾಸಕ ಎಸ್.ಟಿ.ಸೋಮಶೇಖರ್ ಉದ್ಘಾಟಿಸಿದರು. ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಬಿ.ಆರ್.ಶಿವಮಾದಯ್ಯ, ಕೆಪಿಸಿಸಿ ಕಾರ್ಯದರ್ಶಿ ಕೆ.ಎನ್.ದೇವರಾಜು, ಆರ್.ಲಕ್ಷ್ಮಯ್ಯ. ಕೆ.ಆರ್.ಗೋವಿಂದರಾಜು, ಕೆ.ವೈ.ಶಿವಣ್ಣ, ರಾಮಚಂದ್ರ ಇದ್ದಾರೆ
ಶ್ರೀನಿವಾಸಪುರದಲ್ಲಿ ಶುದ್ಧ ನೀರಿನ ಘಟಕವನ್ನು ಶಾಸಕ ಎಸ್.ಟಿ.ಸೋಮಶೇಖರ್ ಉದ್ಘಾಟಿಸಿದರು. ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಬಿ.ಆರ್.ಶಿವಮಾದಯ್ಯ, ಕೆಪಿಸಿಸಿ ಕಾರ್ಯದರ್ಶಿ ಕೆ.ಎನ್.ದೇವರಾಜು, ಆರ್.ಲಕ್ಷ್ಮಯ್ಯ. ಕೆ.ಆರ್.ಗೋವಿಂದರಾಜು, ಕೆ.ವೈ.ಶಿವಣ್ಣ, ರಾಮಚಂದ್ರ ಇದ್ದಾರೆ   

ಬೆಂಗಳೂರು: ಆರ್‌.ಆರ್‌.ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 125 ಶುದ್ಧ ನೀರಿನ ಘಟಕ ಪ್ರಾರಂಭವಾಗಿವೆ. ಇನ್ನೂ 50 ಘಟಕ ಪ್ರಾರಂಭಿಸಲು ಹಣ ಬಿಡುಗಡೆಯಾಗಿದೆ ಎಂದು ಶಾಸಕ ಎಸ್.ಟಿ.ಸೋಮಶೇಖರ್ ತಿಳಿಸಿದರು.

ಶ್ರೀನಿವಾಸಪುರ ಮತ್ತು ಕುಳ್ಳಯನಪಾಳ್ಯದಲ್ಲಿ ನಿರ್ಮಿಸಿರುವ ಶುದ್ಧ ನೀರಿನ ಘಟಕ ಉದ್ಘಾಟಿಸಿ ಅವರು ಮಾತನಾಡಿದರು.

‘ಆರ್.ಲಕ್ಷ್ಮಯ್ಯ ಮತ್ತು ಕೆ.ಆರ್.ಗೋವಿಂದರಾಜು ಅವರು ಜಮೀನು ದಾನ ನೀಡಿದ್ದರಿಂದ ಗ್ರಾಮಕ್ಕೆ ನೀರಿನ ವ್ಯವಸ್ಥೆ ಕಲ್ಪಿಸಲು ಸಾಧ್ಯವಾಗಿದೆ. ಇದೇ ರೀತಿ ಉಳ್ಳವರು ಉದಾರ ಮನಸ್ಸು ತೋರಿದರೆ ಗ್ರಾಮಗಳು ಅಭಿವೃದ್ಧಿ ಕಾಣು
ವುದರಲ್ಲಿ ಸಂಶಯವಿಲ್ಲ’ ಎಂದರು.

ADVERTISEMENT

ಜಿಲ್ಲಾ ಪಂಚಾಯಿತಿ ಸದಸ್ಯೆ ಕುಸುಮಾ ಶಿವಮಾದಯ್ಯ, ‘ದೊಡ್ಡಬೆಲೆ ವ್ಯಾಪ್ತಿಯಲ್ಲಿ ₹50 ಕೋಟಿ ವೆಚ್ಚದಲ್ಲಿ ವಿವಿಧ ಕಾಮಗಾರಿ ನಡೆಯುತ್ತಿವೆ. ಈಗಾಗಲೇ ಹಲವೆಡೆ ನೀರಿನ ಘಟಕ ಮತ್ತು ಟ್ಯಾಂಕ್, ಸಿಮೆಂಟ್ ರಸ್ತೆ, ಡಾಂಬರೀಕರಣ ಕಾಮಗಾರಿ ಮುಗಿದಿವೆ’ ಎಂದರು.

ಮನೆ ಮನೆಗೆ ಉಚಿತ ನೀರಿನ ಕ್ಯಾನ್‍ಗಳನ್ನು ವಿತರಿಸಿ ಮಾತನಾಡಿದ ಜಮೀನು ದಾನಿ ಆರ್.ಲಕ್ಷ್ಮಯ್ಯ, ‘ಈ ಭಾಗದಲ್ಲಿ ನೀರಿನ ಅಭಾವದಿಂದ ಜನರು ಪರಿತಪಿಸುತ್ತಿದ್ದರು. ಶಾಸಕರು ಅಗತ್ಯ ಅನುದಾನ ಒದಗಿಸಿದ್ದರಿಂದ ಕುಡಿಯುವ ನೀರು ಒದಗಿಸುವ ಕಾಮಗಾರಿಗಳು ಬಹುತೇಕ ಪೂರ್ಣಗೊಂಡಿವೆ’ ಎಂದರು.
ಶ್ರೀನಿವಾಸಪುರ ಹಾಲು ಉತ್ಪಾದಕ ಸಹಕಾರ ಸಂಘ ಅಧ್ಯಕ್ಷ ಕೆ.ಆರ್.ಗೋವಿಂದರಾಜು, ‘ಅಭಿವೃದ್ಧಿ ಕೆಲಸ ಮಾಡುವ, ಜನರ ಮಧ್ಯೆ ಕೆಲಸ ಮಾಡುವ ಜನಪ್ರತಿನಿಧಿಗಳಿಂದ ಮಾತ್ರ ಗ್ರಾಮ, ಪಟ್ಟಣ ಅಭಿವೃದ್ಧಿ ಸಾಧ್ಯ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.