ಬೆಂಗಳೂರು: `ಆರಂಭದ ದಿನಗಳಲ್ಲಿ ವ್ಯಾಕ್ಯುಮ್ ಸಲಕರಣೆಗಳ ತಯಾರಿಕೆಯ ಕಂಪೆನಿಯ ನಿರ್ವಹಣೆ ಬಹಳ ತ್ರಾಸದಾಯಕವಾಗಿತ್ತು. ಜತೆಗೆ ಮಾನವ ಸಂಪನ್ಮೂಲ ಕೊರತೆಯೂ ಕಾಡಿತ್ತು~ ಎಂದು ಹಿಂಡ್ ಹೈ ವ್ಯಾಕುಮ್ ಕಂಪೆನಿಯ ಮುಖ್ಯಸ್ಥ ಎಸ್.ವಿ.ನರಸಯ್ಯ ನೆನಪಿಸಿಕೊಂಡರು.
ರೋಟರಿ ಬೆಂಗಳೂರು ಸಂಸ್ಥೆಯು ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರೋಟರಿ ಪಯೋನಿರ್ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.ಹೊಸ ತಂತ್ರಜ್ಞಾನ ಮತ್ತು ಸವಾಲುಗಳನ್ನು ಅಳವಡಿಸಿಕೊಳ್ಳುವಲ್ಲಿ ಕಂಪೆನಿ ಯಶಸ್ವಿಯಾಗಿದೆ. ಅಮೆರಿಕ, ಜರ್ಮನಿ, ಬ್ರೆಜಿಲ್ ವಿದೇಶ ಮಾರುಕಟ್ಟೆಯಲ್ಲಿ ಕಂಪೆನಿಯ ವ್ಯಾಕ್ಯುಮ್ ಸಲಕರಣೆಗಳು ಅಸ್ತಿತ್ವವನ್ನು ಪಡೆದುಕೊಂಡಿದೆ~ ಎಂದು ಹೇಳಿದರು.
`ಕಂಪೆನಿಯಲ್ಲಿ ತಯಾರಾದ ವ್ಯಾಕ್ಯುಮ್ ಸಲಕರಣೆಗಳನ್ನು ಹೆಚ್ಚು ಸಂಶೋಧನೆಗೆ ಒಳಪಡಿಸಿ ಅದರ ನ್ಯೂನ್ಯತೆಗಳನ್ನು ಸರಿಪಡಿಸಲಾಯಿತು. ಆ ಮೂಲಕ ಮಾರುಕಟ್ಟೆಯಲ್ಲಿ ಗುಣಮಟ್ಟ ಕಾಯ್ದುಕೊಳ್ಳಲಾಯಿತು~ ಎಂದು ಹೇಳಿದರು.ರೋಟರಿ ಜಿಲ್ಲಾ ಗರ್ವನರ್ ಆರ್.ಬದರಿಪ್ರಸಾದ್, ಡಾ.ಮಧುರಾ ಎಂ.ಛತ್ರಪತಿ, ಎಂ.ಕೆ.ಪಾಂಡುರಂಗ ಶೆಟ್ಟಿ, ಅರುಣಾ ದಾಸ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.